ಬನ್ನೂರಿನ ಸಮೀಪದ ಮಾದಿಗಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಾಲು ಉತಾದಕ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್. ಸುಹಾಸ್ ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಿದರು. ಕಾರ್ಯದರ್ಶಿ ರಮೇಶ್, ಎಂ.ಸಿ. ಸೋಮೇಗೌಡ ಸೇರಿದಂತೆ ಪ್ರಮುಖರು ಇದ್ದರು.  
ಮೈಸೂರು

ನೋಡಿ ತಿಳಿಯುವ ಕಲಿಕೆ ಹೆಚ್ಚು ಸ್ಮತಿಪಟಲದಲ್ಲಿ ಉಳಿಯುತ್ತದೆ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಎಂ.ಆರ್. ಸುಹಾಸ್ ಅಭಿಪ್ರಾಯ
ಬನ್ನೂರು: ಇಂದು ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿ ತಿಳಿಯುವುದಕ್ಕಿಂತ ನೋಡಿ ತಿಳಿಯುವ ಕಲಿಕೆ ಹೆಚ್ಚು ಸ್ಮತಿಪಟಲದಲ್ಲಿ ಉಳಿಯುವುದರಿಂದ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಟಿವಿಯನ್ನು ತಮ್ಮೂರ ಶಾಲೆಗೆ ಕೊಡುಗೆಯಾಗಿ ನೀಡುತ್ತಿರುವುದಾಗಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್. ಸುಹಾಸ್ ತಿಳಿಸಿದರು.
ಪಟ್ಟಣದ ಸಮೀಪದ ಮಾದಿಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಟಿವಿಯನ್ನು ವಿತರಣೆ ಮಾಡಿ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ಬಹುತೇಕ ಬಡ ಕುಟುಂಬದಿಂದ ಬರುವ ವಿದ್ಯಾರ್ಥಿಗಳಾಗಿದ್ದು, ಇವರಿಗೆ ದೂರದ ವಿಷಯಗಳು, ಪಾಠದಲ್ಲಿ ಬರುವ ಪ್ರಮುಖ ಘಟನೆಗಳನ್ನು ದೃಶ್ಯದ ಮೂಲಕ ತೋರಿಸಲು ಅನುಕೂಲವಾಗಲಿ. ಇದರ ಸೌಲಭ್ಯವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಉತ್ತಮ ಸಾಧನೆ ಮಾಡಲಿ ಎಂದರು.
ಶಾಲೆಯ ಶಿಕ್ಷಕ ವೃಂದದವರು ಎಂ.ಆರ್. ಸುಹಾಸ್ ಅವರನ್ನು ಸನ್ಮಾನಿಸಿದರು. ಕಾರ್ಯದರ್ಶಿ ರಮೇಶ್, ಎಂ.ಸಿ. ಸೋಮೇಗೌಡ ಸೇರಿದಂತೆ ಪ್ರಮುಖರು ಇದ್ದರು.