ತಾಲೂಕಿನ ನಗರ್ಲೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಆಚರಿಸಲಾಯಿತು. ಮೀನಾಕ್ಷಿ, ಲೀಲಾ ,ಶಕೀಲ್ ಪಾಷಾ, ರೇವಣ್ಣ ಇತತರಿದ್ದರು.
- ಕ್ಷೇತ್ರ ಸಂಪನ್ಮೂಲ ಅಧಿಕಾರಿ ಬಸವರಾಜು ಅಭಿಪ್ರಾಯ
ನಂಜನಗೂಡು: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗಾಗಿ ಈ ಕಲಿಕಾ ಹಬ್ಬವನ್ನು ಏರ್ಪಡಿಸಲಾಗಿದ್ದು,ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಬಸವರಾಜು ಅಭಿಪ್ರಾಯಪಟ್ಟರು.
ತಾಲೂಕಿನ ಆಲಂಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಗರ್ಲೆ ಕ್ಲಸ್ಟರ್ ಹಂತದ ಕಲಿಕಾ ಹಬ್ಬವನ್ನ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆ ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಗಳಾಗಿವೆ. ಪಾಲಕರು ಸಹಕಾರವು ಸಹ ಕಲಿಕೆಗೆ ಅಗತ್ಯವಾಗಿದ್ದು ಹೀಗಾಗಿ ಪಾಲಕರನ್ನು ಸಹ ಈ ಕಾರ್ಯಕ್ರಮದಲ್ಲಿ ಒಳಪಡಿಸಲಾಗಿದೆ. ಇಲಾಖೆಯ ಸದ್ದುದೇಶವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪಾಲಕರಿಗೆ ಕರೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮ ರತ್ನಾಕರ ಮಾತನಾಡಿ,ಕಲಿಕಾ ಹಬ್ಬದಲ್ಲಿ
ಎಲ್ಲ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, ಇಲ್ಲಿ ಗೆಲುವು ಸೋಲು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ ಎಂದರು.
ಕ್ಲಸ್ಟರ್ ಸಂಪನ್ಮೂಲ ಸಮನ್ವಯ ಅಧಿಕಾರಿಗಳಾದ ಎನ್.ಚೇತನ್ ಶರ್ಮ ಮಾತನಾಡಿ, ಕಲಿಕಾ ಹಬ್ಬದ ರೂಪುರೇಷೆಗಳನ್ನು ಕುರಿತು ಮಾತನಾಡಿದರು.
ಕೈಬರಹ ಸ್ಪರ್ಧೆ, ಕಥೆ ಹೇಳುವುದು, ರಸಪ್ರಶ್ನೆ, ಮೆಮೊರಿ,ಪೋಷಕಾಂಶ, ರಂಗೋಲಿ, ಸಂತಸದಾಯಕ ಗಣಿತ, ವಿದ್ಯಾರ್ಥಿ,ಪಾಲಕರು ಸಹ ಸಂಬಂಧದ ಆಟಗಳನ್ನು ಆಯೋಜಿಸಲಾಗಿತ್ತು. ಸುಮಾರು 13 ಶಾಲೆಗಳಿಂದ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು 30ಕ್ಕೂ ಹೆಚ್ಚು ಪಾಲಕರು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ, ಉತ್ತಮ ಪ್ರದರ್ಶನ ತೋರಿದರು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕಿ ಮೀನಾಕ್ಷಿ, ಶಿಕ್ಷಕ ಪ್ರತಿನಿಧಿಗಳಾದ ಲೀಲಾ ,ಶಕೀಲ್ ಪಾಷಾ, ಎಸ್‌ಡಿಎಮ್‌ಸಿ ಅಧ್ಯಕ್ಷ ರೇವಣ್ಣ, ಶಿಕ್ಷಕರಾದ ಕುಮಾರಸ್ವಾಮಿ, ಸೌಮ್ಯ ,ರೇಖಾ, ಬಿಆರ್‌ಪಿ ಗಳಾದ ಮೋಹನ್, ಪ್ರಭಾವತಿ, ಸಿಆರ್‌ಪಿ ನಾಗಲಕ್ಷ್ಮೀ, ಶಿಕ್ಷಣ ಸಂಯೋಜಕರಾದ ವೀಣಾ ಇತರರಿದ್ದರು.