ಮೈಸೂರಿನಲ್ಲಿ ನಗರದಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಲಿಂಗಾಯತ್ ಯೂತ್ ಫೋರಂ ಮೈಸೂರು ಘಟಕದ ವತಿಯಿಂದ ಐ-ಲೀಡ್ ಕಾರ್ಯಕ್ರಮದಲ್ಲಿ ಥಿಯರಮ್ಸ್ ಸಂಸ್ಥೆಯ ಸಂಸ್ಥಾಪ ಚಂದ್ರಕಾಂತ್ ಅವರನ್ನು ಸನ್ಮಾನಿಸಲಾಯಿತು.
- ಮೈಸೂರಿನಲ್ಲಿ ಐ-ಲೀಡ್ ಕಾರ್ಯಕ್ರಮ
- ಅಂತಾರಾಷ್ಟ್ರೀಯ ಲಿಂಗಾಯತ್ ಯೂತ್ ಫೋರಂನಿಂದ ಆಯೋಜನೆ
ಮೈಸೂರು: ಉದ್ಯಮದಲ್ಲಿ ಯಶಸ್ವಿಯಾಗಲು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ಅವಶ್ಯ ಎಂದು ಥಿಯರಮ್ಸ್ ಸಂಸ್ಥೆಯ ಸಂಸ್ಥಾಪ ಚಂದ್ರಕಾಂತ್ ಅಭಿಪ್ರಾಯಪಟ್ಟರು.
ನಗರದಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಲಿಂಗಾಯತ್ ಯೂತ್ ಫೋರಂ ಮೈಸೂರು ಘಟಕದ ವತಿಯಿಂದ ಆಯೋಜಿಸಿದ್ದ ಐ-ಲೀಡ್ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಉದ್ಯಮ ಆರಂಭಿಸಬೇಕಾದರೂ ನಾಯಕತ್ವದ ಗುಣ ಇರುವುದು ಮುಖ್ಯವಾಗುತ್ತದೆ. ಆಗ ಮಾತ್ರ ಎಲ್ಲರೊಂದಿಗೆ ಸೇರಿ ನಾವೂ ಕೆಲಸ ಮಾಡುತ್ತಾ ಉದ್ಯಮವನ್ನು ಹಾಗೂ ಇಡೀ ಸಮಾಜವನ್ನು ಬೆಳೆಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ಸಿ.ಚೆನ್ನಬಸವಣ್ಣ ಮಾತನಾಡಿ, ನಾಯಕತ್ವದ ಪ್ರಾಮುಖ್ಯತೆ, ನಾಯಕತ್ವಗುಣ ಬೆಳೆಸಿಕೊಳ್ಳುವ ರೀತಿ, ನಮ್ಮನ್ನು ನಾವು ಅಭಿವೃದ್ಧಿಗೊಳಿಸಿಕೊಳ್ಳಬಹುದಾದ ರೀತಿಗಳು, ಸಾಧನೆಯ ಮಾರ್ಗಗಳು ಮತ್ತು ಸಮಾಜ ಸೇವೆಯ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ್ ಯೂತ್ ಫೋರಂ ಮೈಸೂರು ಘಟಕದ ಅಧ್ಯಕ್ಷ ಕೆ.ಎಚ್.ಕಿರಣ್, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಸಂತೋಷ್, ಮಾಜಿ ಅಧ್ಯಕ್ಷರಾದ ಬಿ.ಎಸ್. ಪ್ರಶಾಂತ್, ಎಚ್.ಎಸ್.ವೀರೇಶ್, ಡಾ. ಧರ್ಮ ಪ್ರಸಾದ್, ಕೆ.ಎಸ್.ಮಹದೇವ ಪ್ರಸಾದ್, ಸಹ ಕಾರ್ಯದರ್ಶಿಗಳಾದ ರುದ್ರೇಶ್, ತೀರ್ಥಸ್ವಾಮಿ, ಐಲೈಫ್ ಟ್ರಸ್ಟ್ ಚೇರ್ಮನ್ ಸಂತೋಷ್ ಕೆಂಚಾಂಬ, ಅವಿನಾಶ್ ಪಾಳೆಗಾರ್, ಪ್ರಮುಖರಾದ ಮನು, ಪ್ರವೀಣ್, ಶಿವಕುಮಾರ್, ಶೀಲಾ, ಜೈ ಶಂಕರ, ಮಲ್ಲಿಕಾರ್ಜುನ್, ರವಿಕಿರಣ್, ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.