ನಂಜನಗೂಡಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾರತ್ ವಿಕಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 25ನೇ ವರ್ಷದ ಬೆಳ್ಳಿ ಹಬ್ಬ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ನಿವೃತ್ತ ಪ್ರಾಧ್ಯಾಪಕ ಸೂರ್ಯನಾರಾಯಣಸ್ವಾಮಿ ಉದ್ಘಾಟಿಸಿದರು. ಅಧ್ಯಕ್ಷ ಬಿ.ಯೋಗೀಶ್, ಎಂ. ಎನ್. ಶ್ರೀಧರ್, ಬಸವರಾಜು, ನಿರ್ದೇಶಕ ಜಿ.ಎಸ್. ಶೇಖರಪ್ಪ, ಶಿಕ್ಷಕಿ ಭಾರತಿ ಇತರರಿದ್ದರು.  
ಮೈಸೂರು

ಶಾಲಾ ದಿನಗಳಲ್ಲೇ ದೇಶಪ್ರೇಮವನ್ನು ಬೆಳೆಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಪ್ರಾಧ್ಯಾಪಕ ಸೂರ್ಯನಾರಾಯಣ ಸ್ವಾಮಿ ಸಲಹೆ
ನಂಜನಗೂಡು: ಇಂದಿನ ಮಕ್ಕಳು ಶಾಲಾ ದಿನಗಳಲ್ಲಿ ಕನ್ನಡ ಪ್ರೇಮದ ಜತೆಗೆ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಭಾರತ್ ವಿಕಾಸ್ ಶಾಲೆಯ ನಿವೃತ್ತ ಪ್ರಾಧ್ಯಾಪಕ ಸೂರ್ಯನಾರಾಯಣ ಸ್ವಾಮಿ ತಿಳಿಸಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ಕೆಎಚ್ ಬಿ ಕಾಲೋನಿಯ ಭಾರತ್ ವಿಕಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬೆಳ್ಳಿ ಹಬ್ಬ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ತಮಿಳು, ತೆಲುಗು,ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಎಲ್ಲ ಭಾಷೆಗಳನ್ನು ಕಲಿತುಕೊಳ್ಳಿ. ಆದರೆ ನಮ್ಮ ಕನ್ನಡ ಭಾಷಾ ಪ್ರೇಮ ಮರೆಯಬಾರದು ಎಂದರು.
ಶಾಲೆಯಲ್ಲಿ ಮುಖ್ಯವಾಗಿ ವಿವೇಕಾನಂದರ ಭಾವಚಿತ್ರದಡಿಯಲ್ಲಿ ಶಾಲೆ ನಡೆಯುತ್ತದೆ. ಒಮ್ಮೆ ವಿವೇಕಾನಂದರು ಅಮೆರಿಕಕ್ಕೆ ಹೋಗಿದ್ದ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದಲ್ಲಿ ಹಸಿವಿನಿಂದ ನಿಂತಿದ್ದಾಗ ಅಮೆರಿಕ ದೇಶದ ಬಾಲಕ ಇವರನ್ನು ಗಮನಿಸಿ ಹಣ್ಣುಗಳನ್ನು ತಂದು ಇವರಿಗೆ ನೀಡಿದನು. ಇದಕ್ಕೆ ಪ್ರತಿಯಾಗಿ ವಿವೇಕಾನಂದರು ಎಷ್ಟು ಹಣ ಕೊಡಬೇಕು ಎಂದು ಕೇಳಿದರು. ಇಲ್ಲ ನನಗೆ ಹಣ ಬೇಡಿ, ನಿಮ್ಮ ಭಾರತ ದೇಶಕ್ಕೆ ಹಿಂತಿರುಗಿದಾಗ ಅಮೆರಿಕಾ ದೇಶದಲ್ಲಿ ಹಸಿವಿನಿಂದ ಇದ್ದಿ ಎನ್ನುವುದನ್ನು ಯಾರಿಗೂ ಹೇಳಬೇಡಿ. ಇದೇ ನೀವು ನನಗೆ ಕೊಡುವ ಹಣ ಎಂದನಂತೆ ಆ ಬಾಲಕ. ಇದರಿಂದಲೇ ತಿಳಿಯುತ್ತದೆ ಆ ಬಾಲಕ ಆ ದೇಶದ ಬಗ್ಗೆ ಎಷ್ಟು ಗೌರವ ಕೊಡುತ್ತಿದ್ದನು ಎಂಬುದು ತಿಳಿಯುತ್ತದೆ. ಇಂದಿನ ಮಕ್ಕಳು ಕೂಡ ಓದುವುದರ ಜತೆಗೆ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯದರ್ಶಿ ಬಸವರಾಜ್ ಮಾತನಾಡಿ, ನಂಜನಗೂಡು ನಗರದಲ್ಲಿ 1994ರಲ್ಲಿ ಭಾರತ್ ವಿಕಾಸ್ ಶಾಲೆ ಪ್ರಾರಂಭ ಮಾಡಬೇಕು ಎಂಬ ಯೋಚನೆ ಬಂದಿತ್ತು. 2000ನೇ ಇಸವಿಯಲ್ಲಿ ಕೇವಲ 14 ಮಕ್ಕಳೊಂದಿಗೆ ಶಾಲೆ ಪ್ರಾರಂಭಗೊಂಡು, 2007 ನೇ ಇಸವಿಯಲ್ಲಿ ಸ್ವಂತ ಕಟ್ಟಡದೊಂದಿಗೆ ಇಂದು 26 ವರ್ಷಗಳನ್ನು ಪೂರೈಸಿ , ಬೆಳ್ಳಿ ಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ. ಶಾಲೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ಭಾರತ್ ವಿಕಾಸ್ ಶಾಲೆಯ ಅಧ್ಯಕ್ಷ ಬಿ.ಯೋಗೀಶ್, ಎಂ.ಎನ್.ಶ್ರೀಧರ್, ಬಸವರಾಜು, ನಿರ್ದೇಶಕ ಜಿ.ಎಸ್. ಶೇಖರಪ್ಪ, ಶಿಕ್ಷಕಿ ಭಾರತೀ ಇತರರು ಇದ್ದರು.