ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್‌ನಿಂದ ಮಂಗಳವಾರ ಆಯೋಜಿಸಿದ್ದ್ದ ಕನ್ನಡ ರಾಜ್ಯೋತ್ಸವವನ್ನು ಮಡ್ಡೀಕೆರೆ ಗೋಪಾಲ್ ಉದ್ಘಾಟಿಸಿದರು. ಅಂಶಿ ಪ್ರಸನ್ನಕುಮಾರ್, ಬಿ.ಎಸ್. ಪ್ರಶಾಂತ್, ಸಿ.ಟಿ. ಜಯಕುಮಾರ್, ಸಿ. ನಾರಾಯಣಗೌಡ, ವಿನೋದ್, ಡೇವಿಡ್, ಎ.ಸಿ.ರವಿ ಇತರರು ಇದ್ದರು. 
ಮೈಸೂರು

ಅನುವಾದದ ನಂತರ ಕುವೆಂಪು ಅವರ ವಿಶ್ವಮಾನವ ಸಂದೇಶ ಹೆಚ್ಚು ಜನರಿಗೆ ತಲುಪಿತು: ಮಡ್ಡೀಕೆರೆ ಗೋಪಾಲ್ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಿಂದ ಮಹಾಕಾವ್ಯದವರೆಗೆ ಸಾಹಿತ್ಯ ರಚಿಸಿರುವ ಏಕೈಕ ಕವಿ ಕುವೆಂಪು
  • ಸಾಹಿತ್ಯ, ಸಂಸ್ಕೃತಿಯನ್ನು ಯುವಜನರಿಗೆ ಪರಿಚಯಿಸುವಲ್ಲಿ ನಾವು ಸೋತಿದ್ದೇವೆ
ಮೈಸೂರು: ಕುವೆಂಪು ಅವರ ಸಾಹಿತ್ಯ ಆಂಗ್ಲ ಭಾಷೆಗೆ ಅನುವಾದಗೊಳ್ಳದಿದ್ದರಿಂದ ಹೊರ ಪ್ರಚಂಚಕ್ಕೆ ಹೆಚ್ಚು ಪರಿಚಿತರಾಗಲಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು. ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್‌ನಿಂದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರಗೀತೆ ರಚಿಸಿದ ರವೀಂದ್ರನಾಥ ಟ್ಯಾಗೋರ್ ಅವರಷ್ಟೇ ನಾಡಗೀತೆ ರಚಿಸಿದ ಕುವೆಂಪು ಅವರು ಸಮರ್ಥರಿದ್ದರೂ ಕೃತಿಗಳು ಕನ್ನಡ ಹೊರತುಪಡಿಸಿ ಬೇರೆ ಭಾಷೆಗೆ ಅನುವಾದ ಆಗಿರಲಿಲ್ಲ ಎಂದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ದೇಜಗೌ ನೇತೃತ್ವದಲ್ಲಿ ನಿಯೋಗ ಭೇಟಿ ಮಾಡಿ ಮನವಿ ಮಾಡಿದ ನಂತರ ಕುವೆಂಪು ಭಾಷಾ ಭಾರತಿ ಮೂಲಕ ಕುವೆಂಪು ಅವರ ಕೃತಿಗಳು ಆಂಗ್ಲ ಭಾಷೆ ಸೇರಿದಂತೆ ವಿವಿಧ ರಾಜ್ಯ, ದೇಶಗಳ ಬೇರೆ, ಬೇರೆ ಭಾಷೆಗಳಿಗೆ ಅನುವಾದವಾದವು. ಹೀಗಾಗಿ ಕುವೆಂಪು ಅವರ ವಿಶ್ವಮಾನವ ಸಂದೇಶ ಹೆಚ್ಚು ಜನರಿಗೆ ತಲುಪಿತು ಎಂದು ಹೇಳಿದರು.
ಮಕ್ಕಳಿಂದ ಮಹಾಕಾವ್ಯದವರೆಗೆ ಸಾಹಿತ್ಯ ರಚಿಸಿರುವ ಏಕೈಕ ಕವಿ ಕುವೆಂಪು ಮಾತ್ರ. ಆದರೆ  ಅವರ ಸಾಹಿತ್ಯ, ಸಂಸ್ಕೃತಿಯನ್ನು ಯುವಜನರಿಗೆ ಪರಿಚಯಿಸುವಲ್ಲಿ ನಾವು ಸೋತಿದ್ದೇವೆ ಎಂದು ವಿಷಾದಿಸಿದರು.
ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನೆಹರು ಯುವ ಕೇಂದ್ರದ ವಿಶ್ರಾಂತ ನಿರ್ದೇಶಕ ಎಂ.ಎನ್. ನಟರಾಜ್ ಅವರನ್ನು ಸನ್ಮಾನಿಸಲಾಯಿತು.
ಮೈಸೂರು ಟ್ರಾವೆಲ್ಸ್  ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್. ಪ್ರಶಾಂತ್, ಸ್ಕಾಲ್ ಇಂಟರ್ ನ್ಯಾಷನಲ್  ಅಧ್ಯಕ್ಷ ಸಿ.ಟಿ. ಜಯಕುಮಾರ್, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ರಾಜ್ಯೋತ್ಸವ ಸಮಿತಿ ಉಪಾಧ್ಯಕ್ಷ ವಿನೋದ್, ಡೇವಿಡ್, ರಾಜ್ಯೋತ್ಸವ  ಸಮಿತಿಯ ಅಧ್ಯಕ್ಷ ಎ.ಸಿ. ರವಿ, ಧಾತ್ರಿ ಇತರರು ಇದ್ದರು.
ಶೃಂಗಾರ್ ಮೆಲೋಡಿಸ್ ತಂಡದವರಿಂದ ಸಂಗೀತ ಸಂಜೆ, ತನ್ವಿ ಸಿ. ಶೇಖರ್ ಅವರಿಂದ ಭರತನಾಟ್ಯ ಹಾಗೂ ನನಗ್ಯಾಕೋ ಡೌಟು! ನಗೆ ನಾಟಕ ಪ್ರದರ್ಶನಗೊಂಡಿತು.