ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀನಿವಾಸ್, ರಂಗನಾಥ್, ಡಾ.ರವಿಕುಮಾರ್, ಕೃಷ್ಣಯ್ಯ, ಮಹೇಶ್, ನಾಗೇಂದ್ರಯ್ಯ, ಹರೀಶ್‌ಗೌಡ, ಕೃಷ್ಣೇಗೌಡ, ಪುಟ್ಟೇಗೌಡ ಇತರರಿದ್ದರು.
ತಹಸೀಲ್ದಾರ್ ಶ್ರೀನಿವಾಸ್ ಹೇಳಿಕೆ ಎಚ್.ಡಿ.ಕೋಟೆಯಲ್ಲಿ ವಿಶ್ವಮಾನವ ದಿನಾಚರಣೆ
ಎಚ್.ಡಿ.ಕೋಟೆ: ನಾವೆಲ್ಲರೂ ಒಂದೇ ಎಂದು ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದವರಲ್ಲಿ ಕುವೆಂಪು ಅವರು ಕೂಡ ಒಬ್ಬರು ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ಐದು ಬಗೆಯಲ್ಲಿ ವರ್ಣಿಸಿದ್ದಾರೆ. ಅದರಲ್ಲಿ ಮನುಜ ಮತ, ವಿಶ್ವಪಥ, ಸರ್ವೊದಯ, ಸಮನ್ವಯ, ಪೂರ್ಣ ದೃಷ್ಟಿಯಾಗಿದೆ. ಜಾತಿ ಭೇದಗಳನ್ನು ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಜಗತ್ತಿಗೆ ಸಾರಿದವರು ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಕುವೆಂಪುರಾಗಿದ್ದರೆ. ಈ ಎಲ್ಲ ಮಹನೀಯರ ತತ್ವ, ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕುವೆಂಪು ಅವರ ಎಲ್ಲ ಸಾಹಿತ್ಯದ ಪ್ರಕಾರಗಳನ್ನು ಓದಿದರೆ ಸಾಕು ಕುವೆಂಪು ಅವರು ಅರ್ಥವಾಗುತ್ತಾರೆ. ಹಾಗೇ ಮೌಢ್ಯ, ಕಂದಾಚಾರಗಳನ್ನು ತಮ್ಮ ಸಾಹಿತ್ಯದ ಮೂಲಕ ವಿರೋಧಿಸಿದ ಮೊದಲ ಕವಿ ಕುವೆಂಪು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂಬೇಡ್ಕರ್ ಸಂವಿಧಾನ ಹಾಗೂ ಕುವೆಂಪು ಅವರ ಸಾಹಿತ್ಯಗಳನ್ನು ಓದಿದರೆ ಶೇ. 70ರಷ್ಟು ಅಂಕಗಳನ್ನು ಪಡೆಯಬಹುದು ಎಂದರು.
ಶಿಕ್ಷಕ ರಂಗನಾಥ್ ಮಾತನಾಡಿ, ನವೋದಯದ ಕಾಲ ಸಂಕ್ರಮಣದ ಕಾಲವಾಗಿದ್ದು 20ನೇ ಶತಮಾನದಲ್ಲಿ ಕುವೆಂಪು ಸಾಹಿತ್ಯ ಕೃಷಿಯನ್ನು ಮಾಡಿದರು. ಕನ್ನಡ ಸಾಹಿತ್ಯಕ್ಕೆ ಮೇರು ಶಿಖರ ಕುವೆಂಪು ಅವರು. ಬದುಕಿನುದ್ದಕ್ಕೂ ವಿಶ್ವಮಾನವ ಸಂದೇಶವನ್ನು ಸಾರಿದರು. ಕುವೆಂಪು ಅವರ ಸರ್ವತೋಮುಖ ಸಾಹಿತ್ಯ ಕೃಷಿಯನ್ನು ಮಾಡಿದವರು ಕುವೆಂಪು. ಕನ್ನಡಕ್ಕೆ ಮೊದಲ ಜ್ಞಾನ ಪೀಠ ಪ್ರಶಸ್ತಿ ಪಡೆದು ಮೊದಲ ಕನ್ನಡಿಗರಾದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಡಾ.ರವಿಕುಮಾರ್, ಕೃಷ್ಣಯ್ಯ, ಮಹೇಶ್, ನಾಗೇಂದ್ರಯ್ಯ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹರೀಶ್ ಗೌಡ, ಗೌರವಾಧ್ಯಕ್ಷ ಕೃಷ್ಣೇಗೌಡ ಮುಖಂಡರಾದ ಪುಟ್ಟೇಗೌಡ, ನರಸಿಂಹೇಗೌಡ, ಜಯಶಂಕರ್, ನಟರಾಜು, ರಾಜೇಂದ್ರ, ನಾಗಣ್ಣ, ಕನ್ನಡ ಪ್ರಮೋದ, ಹೈರಿಗೆ ಶಿವರಾಜು, ಜವರಯ್ಯ, ಸತೀಶ್, ಯಶ್ವಂತ್, ಪ್ರಕಾಶ್, ಚಲುವರಾಜು, ತಮ್ಮೇಗೌಡ, ಹೊ.ಕೆ.ಮಹೇಂದ್ರ, ಶ್ರೀಧರ್, ಮಹಾದೇವು, ಜಗದೀಶ್, ಚಂದ್ರೇಗೌಡ, ಶಿವರಾಜು, ದೇವೇಗೌಡ, ಸತೀಶ್ ಗೌಡ, ರಾಜಣ್ಣ, ಡಿ.ಸಿ ಸ್ವಾಮಿ, ರಾಜೇಶ್, ಸಿದ್ದೇಗೌಡ, ಮಹೇಶ್ ಇದ್ದರು.