ಮಾನಸಗಂಗೋತ್ರಿಯ ಪ್ರಸಾರಾಂಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಪ್ರೊ.ಎನ್.ಕೆ. ಲೋಕನಾಥ್, ರಾಮೇಗೌಡ (ರಾಗೌ), ಪ್ರೊ.ಎಂ.ನಂಜಯ್ಯ ಹೊಂಗನೂರು, ಚನ್ನಬಸಪ್ಪ ಹಾಗೂ ಇತರರು ಇದ್ದರು. 
ಮೈಸೂರು

ಮೈಸೂರು ವಿವಿ ಪ್ರಸಾರಾಂಗದಲ್ಲಿ ಕುವೆಂಪು ಜಯಂತಿ

ಸದೇಶ್ ಕಾರ್ಮಾಡ್
ಮೈಸೂರು: ಕನ್ನಡದ ಚಳುವಳಿಗೆ ರಾಷ್ಟ್ರಕವಿ ಕುವೆಂಪು ತಮ್ಮ ಕವಿತೆಗಳ ಮೂಲಕ ಬೆಂಬಲ ಕೊಟ್ಟರು ಎಂದು ಸಾಹಿತಿ ರಾಮೇಗೌಡ (ರಾಗೌ) ಹೇಳಿದರು.
ಮಾನಸಗಂಗೋತ್ರಿಯ ಪ್ರಸಾರಾಂಗದ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕುವೆಂಪು ಶತಮಾನದ ಕವಿ, ಕುವೆಂಪು ಅವರನ್ನು ಹೊರತು ಪಡಿಸಿ ಕನ್ನಡ ಸಾಹಿತ್ಯವನ್ನು ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಬಾಲ್ಯದಿಂದಲೂ ಕುವೆಂಪು ಅವರ ಸಾಹಿತ್ಯದ ಸಾಲುಗಳನ್ನು ಓದಿ ಬೆಳೆದವನು ನಾನು. ಕುವೆಂಪು ಅವರು ಇದೇ ವಿವಿಯಲ್ಲಿ ಎಂಎ ವಿದ್ಯಾಭ್ಯಾಸ ಮಾಡಿ ಕುಲಪತಿಯಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಪ್ರಮುಖವಾಗಿ ಪ್ರಸಾರಾಂಗವನ್ನು ಕಟ್ಟಿದವರು ಕುವೆಂಪು ಎಂದರು.
ಕಾರ್ಯಕ್ರಮದಲ್ಲಿ ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಅಧೀಕ್ಷಕ ಚನ್ನಬಸಪ್ಪ, ಕಲಾವಿದರಾದ ಡಾ.ಅಮ್ಮ ರಾಮಚಂದ್ರ, ಡಾ. ಸುಂದರೇಶ್ ಇದ್ದರು.