ಬನ್ನೂರಿನ ಬಸವೇಶ್ವರ ವೃತ್ತದಲ್ಲಿ ವಿಶ್ವ ಮಾನವ ಕುವೆಂಪುರವರ ಜನ್ಮದಿನವನ್ನು ಜೆಡಿಎಸ್ ಕಾರ್ಯಕರ್ತರು, ಒಕ್ಕಲಿಗ ಮುಖಂಡರ ನೇತೃತ್ವದಲ್ಲಿ ಆಚರಣೆ ಮಾಡಲಾಯಿತು. ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್. ರಾಮುಸ್ವಾಮಿ, ನಾರಾಯಣಸ್ವಾಮಿ, ದೇವರಾಜ್, ಜಯರಾಂ ಇತರರಿದ್ದರು. 
ಮೈಸೂರು

ಕನ್ನಡದ ಶ್ರೇಷ್ಠ ಕವಿಗಳಲ್ಲಿ ಕುವೆಂಪು ಅಗ್ರಗಣ್ಯರು

ಬನ್ನೂರು: ಸಾಲು ಸಾಲು ಕವಿತೆಗಳನ್ನು ರಚನೆ ಮಾಡಿ ಜನರಿಗೆ ಮನ ಮುಟ್ಟುವಂತೆ ಸಾಹಿತ್ಯಾಭಿರುಚಿಯನ್ನು ನೀಡಿದ ಕೀರ್ತಿ ಕುವೆಂಪು ಅವರಿಗೆ ಸಲ್ಲಬೇಕು. ಕನ್ನಡದ ಕವಿಗಳಲ್ಲಿ ಕುವೆಂಪು ಅಗ್ರಮಾನ್ಯರು ಎಂದು ತಾಲೂಕು ಒಕ್ಕಲಿಗ ಅಂಘದ ಅಧ್ಯಕ್ಷ ವೈ.ಎಸ್. ರಾಮುಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಸಂತೇಮಾಳದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಳ್ಳಲಾದ ಕುವೆಂಪು ಜನ್ಮ ದಿನಾಚರಣೆಯ ಕಾರ್ಯಕ್ರಮಲ್ಲಿ ಪಾಲ್ಗೊಂಡು ಮಾತನಾಡಿ, ಶ್ರೀ ರಾಮಾಯಣ ದರ್ಶನಂ ಎಂಬ ಕೃತಿಯನ್ನು ರಚಿಸಿ ಅದರಲ್ಲಿ ಪ್ರತಿಯೊಂದು ಪಾತ್ರಕ್ಕೂ ಜೀವವನ್ನು ತುಂಬಿದ ಹಿರಿಮೆ ಕುವೆಂಪುಗೆ ಸಲ್ಲಬೇಕು. ಕಿಂದರಿಜೋಗಿ ಕವನ ಸಂಕಲನ ಕಿರಿಯರಿಂದ ಹಿಡಿದು ಹಿರಿಯರವರೆಗೂ ಸಾಹಿತ್ಯಾಸಕ್ತಿಯನ್ನು ಮೂಡಿಸುತ್ತದೆ ಎಂದರು.
ಬೀಡನಹಳ್ಳಿ ಜೆಡಿಎಸ್ ಮುಖಂಡ ದೇವರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಅಭಿಮಾನ ಕಡಿಮೆಯಾಗುತ್ತಿದೆ ಎಂದ ಅವರು ಬೇರೆ ಭಾಷೆಗಳಲ್ಲಿ ಕುವೆಂಪುಗೆ ಪ್ರಾವಿಣ್ಯತೆಯನ್ನು ಹೊಂದಿದ್ದರೂ ಅವರು ಕನ್ನಡ ಭಾಷೆಯನ್ನೇ ತನ್ನ ಕ್ಷೇತ್ರವನ್ನಾಗಿಸಿಕೊಂಡು ಸಾಹಿತ್ಯ ಲೋಕದ ಹಿರಿಮೆಯನ್ನು ಎತ್ತಿಹಿಡಿದರೆಂದು ಶ್ಲಾಘಿಸಿದರು. ಅವರಿಗೆ ರೈತರು ದೀನದಲಿತರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರೆಂದು ತಿಳಿಸಿದರು.
ಬಾಣಗವಾಡಿ ನಾರಾಯಣಸ್ವಾಮಿ ಮಾತನಾಡಿ, ಕುವೆಂಪು ಅವರು ಇಡೀ ಮನುಕುಲಕ್ಕೆ ಸಾರಿದ ವಿಶ್ವ ಮಾನವ ಸಂದೇಶ ಸಾರ್ವಕಾಲಕ್ಕೂ ಸರ್ವರಿಗೂ ಅನ್ವಯವಾಗುವಂತಹದ್ದು. ಸಮ ಸಮಾಜದ ಪರಿಕಲ್ಪನೆಯನ್ನು ಕುವೆಂಪು ಹೊಂದಿದ್ದರು. ಎಂದು ತಿಳಿಸಿದರು.
ಮೇಗಲಕೊಪ್ಪಲಿನ ಜಯರಾಂ, ಕುಂತನಹಳ್ಳಿ ಬಿ.ಚೆಲುವರಾಜು, ದೇವರಾಜ್, ಡಾ. ಮಲ್ಲಿಕಾರ್ಜುನ್, ವೈ.ಬಿ. ಪಟೇಲ್ ಹೇಮಂತ್‌ಕುಮಾರ್, ನೇಗಿಲಯೋಗಿ ಅಧ್ಯಕ್ಷ ರವಿಕುಮಾರ್, ಮೆಡಿಕಲ್ ಚನ್ನೇಗೌಡ, ಕೋಳಿ ಅಂಗಡಿ ದೇವರಾಜ್, ಯಾಚೇನಹಳ್ಳಿ ಶಂಕರೇಗೌಡ, ಬನ್ನೂರು ಬಿ.ಕೆ. ನಿರಂಜನ್, ಮೇಗಲಕೊಪ್ಪಲಿನ ರಂಗಸ್ವಾಮಿ, ಕಂಚನಹಳ್ಳಿ ಚಿಕ್ಕೀರೇಗೌಡ, ಯಡಹಳ್ಳಿ ಸುರೇಶ, ಕೇತುಪುರ ಮಹದೇವು, ಚಾಮನಹಳ್ಳಿ ಪ್ರದೀಪ, ಕೆಂಪೇಗೌಡಕೊಪ್ಪಲಿನ ನೀಲಕಂಠೇಗೌಡ, ಚಾಮನಹಳ್ಳಿ ರಂಗಸ್ವಾಮಿ, ಮಾದೇಶ, ಯಾಲಕ್ಕಿಗೌಡ, ಬಸವನಹಳ್ಳಿ ವೆಂಕಟೇಶ್, ಗೊರವನಹಳ್ಳಿ ರಾಜ್‌ಗೋಪಾಲ್ ಇತರರಿದ್ದರು.