ಹುಣಸೂರು ತಾಲೂಕು ಕೂಡ್ಲೂರು ಗ್ರಾಮದ ಚರ್ಚನ ಅಮಲೋದ್ಭವ ಮಾತೆಯ ವಾರ್ಷಿಕೋತ್ಸವದ ಅಂಗವಾಗಿ ವಿಜೃಂಭನೆಯ ಮೆರವಣಿಗೆ ನಡಸಲಾಯಿತು. 
ಮೈಸೂರು

ಕೂಡ್ಲೂರು ಚರ್ಚ್‌ನ ಅಮಲೋದ್ಭವ ಮಾತೆ ವಾರ್ಷಿಕೋತ್ಸವ

ಹುಣಸೂರು: ತಾಲೂಕಿನ ಹನಗೋಡು ಹೋಬಳಿ ಕೂಡ್ಲೂರು ಗ್ರಾಮದ ಚರ್ಚ್‌ನ ಅಮಲೋದ್ಭವ ಮಾತೆಯ ವಾರ್ಷಿಕೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶನಿವಾರದಿಂದ ಮೂರು ದಿನಗಳ ಕಾಲ ನಡೆದ ವಾರ್ಷಿಕೋತ್ಸವದಲ್ಲಿ ನವೇನ್ ಪೂಜೆ ನೆರವೇರಿಸಲಾಯಿತು. ಪ್ರತಿದಿನ ಬೆಳಗ್ಗೆ 10.30ಕ್ಕೆ ಆಡಂಬರದ ಬಲಿಪೂಜೆಯನ್ನು ನಗರದ ಸಂತ ಫ್ರಾನ್ಸಿಸ್ ಚರ್ಚ್‌ನ ಧರ್ಮಗುರು ಜಾರ್ಜ್ ಮಾರ್ಟೀಸ್ ಮತ್ತು ಸಹಗುರುಗಳ ಸಹಯೋಗದಲ್ಲಿ ನೆರವೇರಿಸಲಾಯಿತು. ಸೋಮವಾರ ಬಣ್ಣಬಣ್ಣದ ಹೂವಿನ ಅಲಂಕಾರದೊಂದಿಗೆ ತೇರನ್ನು ಸಿಂಗರಿಸಿ ಮಾತೆಯ ಮೂರ್ತಿಯೊಂದಿಗೆ ಊರಿನ ಪ್ರಮುಖ ರಸ್ತೆಗಳಲ್ಲಿ ವಾದ್ಯ ತಂಡದೊಂದಿಗೆ ಮೆರವಣಿಗೆ ನಡೆಸಿ, ಚರ್ಚ್ ಆವರಣದಲ್ಲಿ ಸಂಪನ್ನಗೊಳಿಸಲಾಯಿತು. ಚರ್ಚ್ ಆವರಣದಲ್ಲಿ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಿದರು.
ಸಂಭ್ರಮಾಚರಣೆಯಲ್ಲಿ ಭಕ್ತರು, ವಿಚಾರಣೆ ಸಮಿತಿ ಸಭೆಯ ಸದಸ್ಯರು, ಆರ್ಥಿಕ ಸಮಿತಿ ಸದಸ್ಯರು ಭಾಗವಹಿಸಿದ್ದರು.