ಬೆಟ್ಟದಪುರ ಸಮೀಪದ ಹುಣಸೆಕೊಪ್ಪಲು ಗ್ರಾಮಕ್ಕೆ ಆರಂಭಗೊಂಡ ಬಸ್ ಸಂಚಾರಕ್ಕೆ ತಾಲೂಕು ಆಶ್ರಯ ಹಾಗೂ ಗ್ಯಾರಂಟಿ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಚಾಲನೆ ನೀಡಿದರು. ಸುಮಿತ್, ಅಶೋಕ, ಧನಪಾಲ್, ನಾಗರಾಜೇಗೌಡ ಇದ್ದರು. 
ಮೈಸೂರು

ಹುಣಸೆಕೊಪ್ಪಲು ಗ್ರಾಮಕ್ಕೆ ಸರ್ಕಾರಿ ಬಸ್ ಸಂಚಾರ ಆರಂಭ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನಲ್ಲಿ ಜನರ ಸಮಸ್ಯೆಗಳನ್ನು ಅರಿತು ಸಚಿವರಾದ ಕೆ.ವೆಂಕಟೇಶ್ ಅವರು ಜನಪರ ಕೆಲಸ ಮಾಡುತ್ತಿದ್ದಾರೆ ಎಂದು ತಾಲೂಕು ಆಶ್ರಯ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪದ ಹುಣಸೆಕೊಪ್ಪಲು ಗ್ರಾಮಕ್ಕೆ ಆರಂಭಗೊಂಡ ಪಿರಿಯಾಪಟ್ಟಣ ಘಟಕದ ಸರ್ಕಾರಿ ಬಸ್ ಸಂಚಾರಕ್ಕೆ ಶುಕ್ರವಾರ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳ ಜತೆ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸಂಚಾರ ಇಲ್ಲದ ಗ್ರಾಮಗಳ ಬಗ್ಗೆ ವಿಶೇಷ ಕ್ರಮವಹಿಸಿ ಹಂತ ಹಂತವಾಗಿ ಸರ್ಕಾರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹುಣಸೆಕೊಪ್ಪಲು ಗ್ರಾಮದ ಮುಖಂಡರು ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೋರಿ ಮನವಿ ಮಾಡಿದ್ದಾರೆ, ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಿತ್ತೂರು ಸೊಸೈಟಿ ಅಧ್ಯಕ್ಷ ಸುಮಿತ್, ಅಶೋಕ, ವಕೀಲ ಧನಪಾಲ್, ನಾಗರಾಜೇಗೌಡ, ಪುಟ್ಟೇಗೌಡ, ಶಿವೇಗೌಡ, ರಾಜೇಗೌಡ ಇದ್ದರು.