ಪಿರಿಯಾಪಟ್ಟಣದ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಯಾದವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಪಿ.ಡಿ.ಪ್ರಸನ್ನ, ಪಿ.ಕೆ.ವೆಂಕಟೇಶ್, ಸತ್ಯನಾರಾಯಣ್, ವೆಂಕಟೇಶ್, ತೇಜಸ್, ಎ.ಪಿ.ಮಂಜುನಾಥ್ ಇತರರು ಇದ್ದರು.  
ಮೈಸೂರು

ಶ್ರೀ ಕೃಷ್ಣನ ತತ್ವ, ಸಂದೇಶ ದಾರಿದೀಪ

ಪಿರಿಯಾಪಟ್ಟಣ: ಜೀವನ ಸಾರ್ಥಕತೆಗೆ ಧರ್ಮ ಮಾರ್ಗದಲ್ಲಿ ನಡೆಯಲು ಶ್ರೀಕೃಷ್ಣನ ತತ್ವ, ಸಂದೇಶಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದು ತಾಲೂಕು ಯಾದವ ಸಂಘದ ಅಧ್ಯಕ್ಷ ಪಿ.ಡಿ.ಪ್ರಸನ್ನ ತಿಳಿಸಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶುಕ್ರವಾರ ಪಟ್ಟಣದ ಚನ್ನಪಟ್ಟಣ ಬೀದಿಯಲ್ಲಿರುವ ಲಕ್ಷ್ಮೀ
ವೆಂಕಟರಮಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ತಾಲೂಕು ಕೃಷ್ಣ ಯಾದವ ಗೊಲ್ಲ ಸಂಘದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ದುಷ್ಟಶಕ್ತಿಗಳ ಉಪಟಳ ಹೆಚ್ಚಿದಾಗ ಅವನ್ನು ನಿಯಂತ್ರಣ ಮಾಡಲೇಬೇಕು ಎಂದು ದೇವರು ಪ್ರತಿ ಯುಗದಲ್ಲೂ ಅವತಾರ ಮಾಡಿದ್ದಾನೆ. ಮಹಾಭಾರತದಲ್ಲಿ ಕೃಷ್ಣನು ಕೌರವರ ಪಾಲಿಗೆ ವಿರೋಧಿಯಾಗಿ ಕಂಡರೂ ಧರ್ಮದ ಉಳಿವಿಗಾಗಿ ಪಾಂಡವರ ಪಕ್ಷದಲ್ಲಿ ನಿಲ್ಲುತ್ತಾನೆ. ಹಾಗಾಗಿ ಕೃಷ್ಣನ ಸಂದೇಶಗಳನ್ನು ಅನುಸರಿಸಿ ನಡೆಯುವವರಿಗೆ ವರವಾಗಲಿವೆ. ಅಧರ್ಮದ ಹಾದಿಯಲ್ಲಿದ್ದವರಿಗೆ ಶಾಪವಾಗಲಿವೆ ಎಂದರು.
ಗೊಲ್ಲ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಇನ್ನೂ ಅಭಿವೃದ್ಧಿ ಹೊಂದಬೇಕು. ಶಿಕ್ಷಣ ಕ್ಷೇತ್ರಕ್ಕೆ ಮನ್ನಣೆ ನೀಡಬೇಕು. ಎಲ್ಲರೂ ಉನ್ನತ ವ್ಯಾಸಂಗದತ್ತ ಗಮನ ಹರಿಸಬೇಕು. ಕಾಲ ಕಾಲಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ಪಿ.ಡಿ.ಪ್ರಸನ್ನ ಸಲಹೆ ನೀಡಿದರು. ಯಾದವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಂಘದ ಗೌರವಾಧ್ಯಕ್ಷ ಪಿ.ಕೆ.ವೆಂಕಟೇಶ್, ಉಪಾಧ್ಯಕ್ಷ ಸತ್ಯನಾರಾಯಣ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಪದಾಧಿಕಾರಿಗಳಾದ ತೇಜಸ್, ಎ.ಪಿ.ಮಂಜುನಾಥ್, ಸುಬ್ರಹ್ಮಣ್ಯ, ಸದಸ್ಯರಾದ ಕುಮಾರ್, ಹರೀಶ್, ಗುರುರಾಜ್, ದೇವರಾಜ್, ಪವನ್, ಕುಮಾರ್, ಪಿ.ಎಂ.ವೆಂಕಟೇಶ್. ಯೋಗೇಶ್, ಗಣೇಶ್, ಮಹೇಂದ್ರ, ಕಿರಣ್, ಮಧು, ರವಿ, ಅರ್ಚಕ ಚಲುವರಾಜು ಉಪಸ್ಥಿತರಿದ್ದರು.