ಅಂಬೇಡ್ಕರ್ 
ಮೈಸೂರು

ಕೋರೆಗಾಂವ್ ವಿಜಯೋತ್ಸವ

ಮೈಸೂರು: ದಲಿತ ವಿದ್ಯಾರ್ಥಿ ಪರಿಷತ್, ದಲಿತ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಜ.2ರಂದು ಸಂಜೆ 4.30ಕ್ಕೆ ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಯೋಜಿಸಲಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ವಿಶ್ವಪ್ರಸಾದ್ ತಿಳಿಸಿದರು.
1818ರಲ್ಲಿ ಮಹಾರಾಷ್ಟ್ರದ ಕೋರೆಗಾಂವ್ ಬಳಿ ಮಹಾರ್ ಸಮುದಾಯದವರು ಯುದ್ಧದಲ್ಲಿ ಪಾಲ್ಗೊಂಡು ಜಯ ಗಳಿಸಿದ ಮಹತ್ವವನ್ನು ಡಾ. ಅಂಬೇಡ್ಕರ್ ವಿವರಿಸಿದ್ದಾರೆ. ಅದು ಸಾಮ್ರಾಜ್ಯಶಾಹಿ ವಿರುದ್ಧದ ಯುದ್ಧವಾಗಿರದೇ ಅಂದಿನ ಜಡ್ಡುಗಟ್ಟಿದ ವ್ಯವಸ್ಥೆ, ಶೋಷಿತರ ಮೇಲಿನ ದೌರ್ಜನ್ಯದ ವಿರುದ್ಧ ಗಳಿಸಿದ ಜಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ಲಿಂಗರಾಜು, ಶಿವಶಂಕರ್, ರಾಜು ಹಾಗೂ ಇನ್ನಿತರರು ಇದ್ದರು.