ಕುವೆಂಪುನಗರದಲ್ಲಿನ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬುದ್ಧಿಮಾಂದ್ಯ ಮಕ್ಕಳಿಗಾಗಿ ಕಿಡ್ಸ್ ಕಾರ್ನಿವಲ್ ನೆರವೇರಿತು. ಹರೀಶ್ ಶೆಣೈ, ವಿನಾಯಕ್, ರಜತ್, ಸೂರಜ್, ಕುಶಾಲ್ ಇದ್ದರು. 
ಮೈಸೂರು

ಬುದ್ಧಿಮಾಂದ್ಯ ಮಕ್ಕಳಿಗಾಗಿ ಕಿಡ್ಸ್ ಕಾರ್ನಿವಲ್

ಮೈಸೂರು: ಮೈಸೂರು ಹೆರಿಟೇಜ್ ರೌಂಡ್ ಟೇಬಲ್-109ರ ವತಿಯಿಂದ ಕುವೆಂಪುನಗರದಲ್ಲಿನ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬುದ್ಧಿಮಾಂದ್ಯ ಮಕ್ಕಳಿಗಾಗಿ ಕಿಡ್ಸ್ ಕಾರ್ನಿವಲ್ ನೆರವೇರಿತು.
ಇದು ಯಾವುದೇ ಸ್ಪರ್ಧೆಯಾಗಿರಲಿಲ್ಲ. ಬದಲಾಗಿ ಬುದ್ಧಿಮಾಂದ್ಯ ಮಕ್ಕಳು ಕಾರ್ಯಕ್ರಮಕ್ಕೆ ಆಗಮಿಸಿ, ಶಿಕ್ಷಕರು, ಪಾಲಕರೊಡನೆ ಹಬ್ಬದ ವಾತಾವರಣದಲ್ಲಿ ಸಂಭ್ರಮಿಸಿದರು. ತಮಗಾಗಿ ಆಯೋಜಿಸಿದ್ದ ನಾನಾ ಪ್ರಕ್ರಿಯೆಗಳಲ್ಲಿ ಭಾಗಿಯಾದರು. ಮೊದಲಿಗೆ ಮಕ್ಕಳನ್ನು ಪಾಪ್‌ಕಾರ್ನ್, ಕಾಟನ್ ಕ್ಯಾಂಡಿ, ಚಾಕಲೇಟ್ ಫೌಂಟೇನ್, ಪೇಸ್ಟ್ರಿ ಮೊದಲಾದವುಗಳೊಡನೆ ಸ್ವಾಗತ ಕೋರಲಾಯಿತು. ಸುಮಾರು 800ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಯೋಜಕರಾದ ಹರೀಶ್ ಶೆಣೈ, ವಿನಾಯಕ್, ರಜತ್, ಸೂರಜ್, ಕುಶಾಲ್ ಇದ್ದರು.