ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸೇವಾ ಸಮಿತಿಯವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸೇವಾ ಸಮಿತಿಯ ವತಿಯಿಂದ ಶನಿವಾರ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಎಚ್.ಬಿ. ಯೋಗೇಶ್ ಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರು ದೂರದೃಷ್ಟಿಯ ಆಡಳಿತಗಾರರಾಗಿದ್ದು, ಸಮಾಜದ ಅಭಿವೃದ್ಧಿ ಮತ್ತು ಜನಪರ ಆಡಳಿತಕ್ಕೆ ಮಾದರಿಯಾಗಿದ್ದಾರೆ. ಅವರ ಆದರ್ಶ, ಸೇವಾ ಮನೋಭಾವ ಮತ್ತು ನಾಯಕತ್ವದ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಜನತೆ ಕೆಂಪೇಗೌಡರ ಇತಿಹಾಸ ಮತ್ತು ಸಾಧನೆಗಳನ್ನು ಅರಿತು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು. ಇಂತಹ ಜಯಂತಿ ಆಚರಣೆಗಳು ಮಹನೀಯರ ತತ್ವ-ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉತ್ತಮ ವೇದಿಕೆಯಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎಚ್.ಟಿ. ಗೋವಿಂದೆಗೌಡ, ಕೃಷ್ಣಗೌಡ, ಮಂಜುನಾಥ್, ಕಾಂತರಾಜು, ಎಚ್.ಸಿ. ಮಹೇಶ್, ಎಚ್.ಸಿ. ಪ್ರಕಾಶ್, ಕೆ.ಟಿ. ನಾಗೇಂದ್ರ, ರೇವಜಿತ್‌ಗೌಡ, ಐ.ಟಿ. ಮಂಜುನಾಥ್, ಎಚ್.ಆರ್. ಶ್ರೀನಿವಾಸ್, ಸರ್ಕಲ್ ರಾಜೇಗೌಡ, ಎಚ್.ಜೆ. ಸುರೇಶ್, ಸೋಮಶೇಖರ್, ಕಿರಣ್, ಮನೋಜ್, ಎಚ್.ಸಿ. ಕೃಷ್ಣಗೌಡ, ಅನಿಲ್, ಮುತ್ತುರಾಜು (ಕೆಸವಿನಕೆರೆ), ಸತೀಶ್, ಅಶೋಕ, ಕೆಸುವಿನಕೆರೆ ಸ್ವಾಮಿಗೌಡ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.