ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ 517 ನೇ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟಿಸಿದರು. 
ಮೈಸೂರು

ನಾಡ ಪ್ರಭು ಕೆಂಪೇಗೌಡರ 517 ನೇ ಜಯಂತಿ

ಎ. ಆರ್. ರಘುರಾಮ
ಎಚ್‌.ಡಿ.ಕೋಟೆ: ಪಟ್ಟಣದಲ್ಲಿ
ನಾಡ ಪ್ರಭು ಕೆಂಪೇಗೌಡರ ಭವನ ಕಟ್ಟಲು ಜಾಗ ಮಾಡುವ ಜೊತೆಗೆ ಸರ್ಕಾರದಿಂದ ಎರಡು ಕೋಟೆ ರೂ ಅನುದಾನ ಬಿಡುಗಡೆಗೂ ಕ್ರಮ ವಹಿಸುತ್ತೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ನಾಡ ಪ್ರಭು ಕೆಂಪೇಗೌಡರ 517 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಂಪೇಗೌಡರ ಭವನ ನಿರ್ಮಾಣ ಮಾಡಲು ಶಾಸಕರು ಮನಸ್ಸು ಮಾಡುತ್ತಿಲ್ಲ ಎಂದು ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ ಈ ಹಿಂದೆಯೇ ಪುರಸಭಾ ಮುಂಭಾಗದಲ್ಲಿ 32 ಗುಟೆ ಜಾಗವನ್ನು ಗುರುತು ಮಾಡಲಾಗಿತ್ತು, ಆದರೆ ದಾಖಲಾತಿ ಸಮಸ್ಯೆಯಿಂದ ಅದು ಆಗಿಲ್ಲ. ಮುಂದಿನ ದಿನಗಳಲ್ಲಿ ದಾಖಲಾತಿ ಸರಿ ಮಾಡಿ ಇಲ್ಲಾ ಬೇರೆ ಜಾಗ ಗುರುತು ಮಾಡಿ ಭವನ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶಿಲ್ದಾರ್ ಶ್ರೀನಿವಾಸ್ ಮಹನೀಯರ ಜಯಂತಿ ಆಚರಣೆ ಮಾಡಬೇಕಾದರೆ ಅವರು ಸಮಾಜಕ್ಕೆ ಕೊಟ್ಟ ಕೊಡುಗೆಗಳನ್ನು ನೆನಪಿಸುವ ಕೆಲಸ ಮಾಡಬೇಕು. ಬೆಂಗಳೂರು ನಗರ ನಿರ್ಮಾಣ ಮಾಡಿದ ಕೀರ್ತಿ ಕೆಂಪೇಗೌಡ ರಿಗೆ ಸಲ್ಲುತ್ತದೆ. ಬೆಂಗಳೂರು ನಗರದಲ್ಲಿ ವಿವಿಧ ಸಮುದಾಯದ ಕಸುಬು ಗಳಿಗೆ ಮಾರುಕಟ್ಟೆ ಸ್ಥಾಪನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಕೆರೆಕಟ್ಟೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಿಕೊಟ್ಟರು. ದೇವಸ್ಥಾನಗಳಲ್ಲಿ ಕಲ್ಯಾಣಿ ನಿರ್ಮಾಣ ಮಾಡಿ ಕುಡಿಯುವ ನೀರಿಗೆ ಆದ್ಯತೆ ನೀಡಿದರು. ಅವರ ಕೊಡುಗೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿಕೊಡುವ ಕೆಲಸ ಮಾಡಬೇಕು.
ಸಮಾಜದಲ್ಲಿ ಇದ್ದ ಅಸಮಾನತೆಯನ್ನು ಓಗಾಲಾಡಿಸಲು ಸಾಮಾಜಿಕ ಕಾರ್ಯಗಳನ್ನು ನೀಡಿದ್ದಾರೆ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಎಂಎಂಕೆ ಕಾಲೇಜಿನ ಸಂಸ್ಥಾಪಕರಾದ ಎಸ್.ಪಿ ಪ್ರಕಾಶ್ ಮಾತನಾಡಿ ಅನೇಕ ಮಹನೀಯರ ಜಯಂತಿ ಆಚರಣೆ ಮಾಡುತ್ತೇವೆ. ಅವರ ಸೇವೆ ಕೊಡುಗೆಗಳನ್ನು ಸ್ಮರಿಸುವ ಕೆಲಸವನ್ನು ಮಾಡುತ್ತೇವೆ. ಮಹನೀಯರು ನಮ್ಮಲ್ಲಿ ಇದ್ದು ಹೋದವರು ಎಂದು ನೆನಪಿಸುವ ಕೆಲಸವೇ ಜಯಂತೋತ್ಸವ ಆಚರಣೆ.
ನಾಲ್ಲರೂ ಒಂದೇ ಎಂದು ಸಾರಿದ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸಾರಿದರು,
ಒಕ್ಕಲಿಗ ಸಮುದಾಯದ ಮುಖಂಡರಾದ ಕೃಷ್ಣೇಗೌಡ, ಹರೀಶ್, ಸುರೇಂದ್ರ, ಈರೇಗೌಡ, ನಟರಾಜು, ಶಂಭುಗೌಡ, ಸೋಮಣ್ಣ, ಪುಟ್ಟೇಗೌಡ, ಶಿವರಾಜು, ಮಾದೇಗೌಡ, ದೇವೇಗೌಡ, ರವಿ, ಗಣೇಶ, ತಮ್ಮಣ್ಣ, ಮಹೇಶ್, ಎ.ಟಿ ನಾಗರಾಜು, ವೇಣು, ಲೋಕೇಶ್, ಮಹದೇವಣ್ಣ, ಜಯರಾಮ್, ಸತೀಶ್, ಕೃಷ್ಣೇಗೌಡ, ಮಹೇಂದ್ರ, ಚಲುವರಾಜು ಇದ್ದರು.