ತಿ.ನರಸೀಪುರ ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ನೋಟ್ ಪುಸ್ತಕ, ಲೇಖನಿ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ರಾಜಶೇಖರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಎನ್.ಮರಿಸ್ವಾಮಿ, ಪೂಜಿತ್ ಮೆಡಿಕಲ್ಸ್ ಕುಮಾರ್, ಗುರುಮಲ್ಲಪ್ಪ, ತಾಯೂರು ಪ್ರಕಾಶ್, ಸುರೇಶ್ ಇತರರು ಇದ್ದರು.
- ಆರ್ಥಿಕ ಸಾಕ್ಷರತಾ ಅಧಿಕಾರಿ ಎಸ್.ವಿ.ರಮೇಶ್ ರಾವ್ ಸಲಹೆ
ತಿ.ನರಸೀಪುರ: ಮೊಬೈಲ್ ಮೋಹ ಮಕ್ಕಳನ್ನು ಆಕರ್ಷಿಸಿ, ಹಾಳು ಮಾಡುತ್ತಿರುವುದರಿಂದ ಪಾಲಕರು ಸಾಧ್ಯವಾದಷ್ಟು ಮಕ್ಕಳನ್ನು ಮೊಬೈಲ್ ನಿಂದ ದೂರವಿಡಬೇಕು ಎಂದು ಕೆನರಾ ಬ್ಯಾಂಕ್ ಅಮೂಲ್ಯ ಕೇಂದ್ರದ ಆರ್ಥಿಕ ಸಾಕ್ಷರತಾ ಅಧಿಕಾರಿ ಎಸ್.ವಿ.ರಮೇಶ್ ರಾವ್ ಸಲಹೆ ನೀಡಿದ್ದಾರೆ.
ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಗ್ರಾಮೀಣ ಪೌಂಡೇಶನ್ ಆಫ್ ಕರ್ನಾಟಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಲೇಖನ ಸಾಮಗ್ರಿಗಳ ವಿತರಣೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ದೃಷ್ಟಿ ದೋಷ, ಶ್ರವಣದ ಸಾಮರ್ಥ್ಯ ಕುಗ್ಗುವಿಕೆ ಹಾಗೂ ಮಾನಸಿಕ ಖಿನ್ನತೆ ಹೆಚ್ಚುತ್ತಿರುವುದರಿಂದ ಮಕ್ಕಳು ಕೂಡ ಮೊಬೈಲ್ ಬಳಕೆ ಕ್ರಮೇಣವಾಗಿ ಕೈ ಬಿಡಬೇಕು ಕಿವಿಮಾತು ಹೇಳಿದರು.
ಆಧುನಿಕ ತಂತ್ರಜ್ಞಾನ ಕ್ರಾಂತಿಯಿಂದ ಜಗತ್ತನ್ನು ಮೊಬೈಲ್ ವ್ಯಾಪಿಸಿಬಿಟ್ಟಿದೆ. ಮೊಬೈಲ್‌ನಲ್ಲಿ ಬ್ಯಾಂಕಿಂಗ್ ನಂತಹ ಹಣಕಾಸು ವಹಿವಾಟು ನಡೆಸುತ್ತಿರುವ ಪರಿಣಾಮ ಸುಲಭವಾಗಿ ಆನ್ಲೈನ್ ವಂಚನೆಗೆ ಸಿಲುಕಿ ಕೊಳ್ಳುತ್ತಿದ್ದೇವೆ. ಯುವ ಸಮುದಾಯ ಒಂದು ಅಂತರ್ಜಾಲ ಜೂಜಾಟಕ್ಕೆ ಬಲಿಯಾಗಿ ಭವಿಷ್ಯದ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ವಕ್ತಾರ ತಾಯೂರು ಪ್ರಕಾಶ್ ಮಾತನಾಡಿ, ಶಿಕ್ಷಣ ವ್ಯಕ್ತಿಯ ಭವಿಷ್ಯವನ್ನು ರೂಪಿಸುವುದರಿಂದ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು. ಕಷ್ಟದ ಬದುಕಿನ ನಡುವೆಯೂ ಶಿಕ್ಷಣ ಪಡೆದು ಅಪ್ರತಿಮ ಸಾಧನೆ ಮಾಡಿ, ದೇಶದ ಭವಿಷ್ಯವನ್ನು ರೂಪಿಸಿದ ಗಣ್ಯರನ್ನು ಮಾದರಿಯಾಗಿಟ್ಟುಕೊಂಡು ಮಕ್ಕಳು ಶೈಕ್ಷಣಿಕವಾಗಿ ಸಾಧನೆ ಮಾಡಿ, ಶಿಕ್ಷಣ ಕಲಿಸಿದ ಗುರುವಿಗೆ ಹಾಗೂ ಪಾಲಕರಿಗೆ ಹೆಸರು ತರಬೇಕೆಂದು ಕರೆ ನೀಡಿದರು.
ಇದೇ ವೇಳೆ ಎಸ್.ವಿ.ರಮೇಶ್ ರಾವ್ ಸೇರಿದಂತೆ ಉದ್ಭವ್ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಶಿವಾನಂದ, ಪತ್ರಿಕಾ ಪ್ರಸರಂಗ ಜಿಲ್ಲಾ ವ್ಯವಸ್ಥಾಪಕ ಶ್ರೀಧರ್ ಹಾಗೂ ಉದ್ಯಮಿ ಸತೀಶ್ ಅವರನ್ನು ಸನ್ಮಾನಿಸಲಾಯಿತು. ನರಗ್ಯಾತನಹಳ್ಳಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಹೊಸೂರುಹುಂಡಿ ಮಠದ ಶ್ರೀ ರಾಜಶೇಖರ ಸ್ವಾಮೀಜಿ, ಗ್ರಾಮೀಣ ಪೌಂಡೇಶನ್ ಆಫ್ ಕರ್ನಾಟಕ ಟ್ರಸ್ಟ್ ಅಧ್ಯಕ್ಷ ಎನ್.ಮರಿಸ್ವಾಮಿ(ಕುಮಾರ್), ಖಜಾಂಚಿ ಪೂಜಿತ್ ಮೆಡಿಕಲ್ಸ್ ಕುಮಾರ್, ನಿರ್ದೇಶಕರಾದ ಶಿವಣ್ಣ,ಬಿ.ನಿಂಗರಾಜು ಸಿ.ಬಿ ಹುಂಡಿ,ಸಿದ್ದರಾಜು ಪಿ ಹೊಸಪುರ, ಕಾವೇರಿಪುರ ಕೆ.ಎಂ.ಮಲ್ಲು, ಮಲ್ಲಿಕಾ ಶಂಭುದೇವನಪುರ, ಮುಖ್ಯ ಶಿಕ್ಷಕ ಕೇಶವ್, ಸಹ ಶಿಕ್ಷಕರಾದ ಉಷಾರಾಣಿ,ಪ್ರಕಾಶ್, ಗ್ರಾ.ಪಂ ಸದಸ್ಯ ಸುರೇಶ್, ಮುಖಂಡರಾದ ಅಕ್ಕಿ ನಾಗಪ್ಪ, ಗುರುಮಲ್ಲಪ್ಪ, ಶಾಲೆಯ ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.