ತಿ.ನರಸೀಪುರ ಪಟ್ಟಣದ ಗೌತಮ ಬುದ್ಧ ಜನಸೇವಾ ಟ್ರಸ್ಟ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೋಮಲಾಕ್ಷಿ ನಾಗರಾಜು, ಬಿ.ಮಹದೇವಸ್ವಾಮಿ, ಮಧು ಶ್ರೀನಿವಾಸ ಮೂರ್ತಿ ಇತರರು ಇದ್ದರು.
- ಬೆಂಗಳೂರಿನ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆಯಿಂದ ಪ್ರದಾನ
ತಿ.ನರಸೀಪುರ: ಪಟ್ಟಣದ ಗೌತಮ ಬುದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷೆ ಕೋಮಲಾಕ್ಷಿ ನಾಗರಾಜು ಅವರಿಗೆ ಬೆಂಗಳೂರಿನ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆಯು ಕರ್ನಾಟಕ ಸೇವಾ ರತ್ನಪ್ರಶಸ್ತಿ ನೀಡಿ ಗೌರವಿಸಿದೆ.
ಕಾಲೇಜು ರಸ್ತೆಯಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಗೌತಮಬುದ್ದ ಜನಸೇವಾ ಟ್ರಸ್ಟ್ ಸಂಸ್ಥೆಯನ್ನು ದಿ.ಶ್ರೀನಿವಾಸಮೂರ್ತಿಯವರು ಹತ್ತಾರು ವರ್ಷಗಳ ಶ್ರಮದಿಂದ ಕಟ್ಟಿ ಬೆಳೆಸಿ ಸಂಸ್ಥೆಗೋಸ್ಕರ ಜೀವವನ್ನೇ ತ್ಯಾಗ ಮಾಡಿಹೋಗಿದ್ದಾರೆ. ಅವರ ಕನಸು ನನಸು ಮಾಡಲು ಅವರ ಮಾರ್ಗದರ್ಶನದಂತೆ ಟ್ರಸ್ಟಿಗಳೆಲ್ಲರೂ ಬಹಳ ಶ್ರಮಪಟ್ಟು ಕೆಲಸ ಮಾಡುತ್ತಿದ್ದೇವೆ ಎಂದರು.
ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ ನನ್ನ ಮಕ್ಕಳಾದ ಎನ್.ವೈಭವ್ ಶಿವರಂಜನ್ ಹಾಗೂ ಎನ್.ಶಿವಾಂಜಲಿ ಅವರಿಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದು, ಬೆಂಗಳೂರಿನಲ್ಲಿ ಮೂವರೂ ಪ್ರಶಸ್ತಿ ಸ್ವೀಕರಿಸಿದ್ದೇವೆ ಎಂದರು.
ಕಾರ್ಯದರ್ಶಿ ಬಿ.ಮಹದೇವಸ್ವಾಮಿ, ಖಜಾಂಚಿ ಮಧು ಶ್ರೀನಿವಾಸ ಮೂರ್ತಿ ಹಾಗೂ ಅಂಕನಹಳ್ಳಿ ಪುಟ್ಟರಾಜು ಇದ್ದರು.