ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬೈಕ್ ರ‌್ಯಾಲಿಗೆ ವಿಧಾನ ಪರಿಷತ್ ಸದಸ್ಯ, ಮಾಜಿ ಸೈನಿಕ ಸಿ.ಎನ್. ಮಂಜೇಗೌಡ ಚಾಲನೆ ನೀಡಿದರು. ಎಂ.ಕೆ. ಸೋಮಶೇಖರ್, ಎಚ್.ವಿ. ರಾಜೀವ್ ಹಾಗೂ ಇತರರು ಇದ್ದರು. 
ಮೈಸೂರು

ಮೈಸೂರಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ : ಮಾಜಿ ಸೈನಿಕರಿಂದ ಬೈಕ್ ರ‌್ಯಾಲಿ

ಮೈಸೂರು: ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ಜಿಲ್ಲಾ ಮಾಜಿ ಸೈನಿಕರ ಸಂಘಗಳ ಒಕ್ಕೂಟದ ವತಿಯಿಂದ ಭಾನುವಾರ ನಗರದಲ್ಲಿ ಬೈಕ್ ರ‌್ಯಾಲಿ ಆಯೋಜಿಸಿ ಕಾರ್ಗಿಲ್ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.
ನಗರದ ಮೆಟ್ರೋಪೋಲ್ ವೃತ್ತದಲ್ಲಿ ಆಯೋಜಿಸಿದ್ದ ಬೈಕ್ ರ‌್ಯಾಲಿಗೆ ವಿಧಾನ ಪರಿಷತ್ ಸದಸ್ಯ, ಮಾಜಿ ಸೈನಿಕ ಸಿ.ಎನ್. ಮಂಜೇಗೌಡ ಚಾಲನೆ ನೀಡಿದರು. ಶಾಸಕರಾದ ಕೆ. ಹರೀಶ್ ಗೌಡ ಹಾಗೂ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹಾಗೂ ಇತರರು ಇದ್ದರು.
ನೂರಾರು ಮಾಜಿ ಸೈನಿಕರು ತಮ್ಮ ಬೈಕ್‌ಗಳಿಗೆ ತ್ರಿವರ್ಣ ಧ್ವಜವನ್ನು ಅಲಂಕರಿಸಿಕೊಂಡು ಅಮರ್ ರಹೇ, ಅಮರ್ ರಹೇ ಎಂಬ ಘೋಷಣೆಗಳನ್ನು ಮೊಳಗಿಸುತ್ತಾ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕಾರ್ಗಿಲ್ ವೀರರಿಗೆ ಗೌರವ ಸಲ್ಲಿಸಿದರು. ದೇಶಭಕ್ತಿಯೊಂದಿಗೆ ಉತ್ಸಾಹದಿಂದ ಸಾಗಿದ ರ‌್ಯಾಲಿ ಸಾರ್ವಜನಿಕರ ಗಮನ ಸೆಳೆಯಿತು. ರ‌್ಯಾಲಿಯು ಮೆಟ್ರೋಪೋಲ್ ವೃತ್ತದಿಂದ ಹೊರಟು, ದಾಸಪ ವೃತ್ತ, ರೈಲ್ವೇ ನಿಲ್ದಾಣದ ವೃತ್ತ, ಇರ್ವಿನ್ ರಸ್ತೆ, ಅಶೋಕ ರಸ್ತೆ, ಚಾಮರಾಜ ಜೋಡಿ ರಸ್ತೆ ಮೂಲಕ ಸಾಗಿ ಕುವೆಂಪುನಗರದ ಚಿಕ್ಕಮ್ಮ ನಿಕೇತನ ಕಲ್ಯಾಣ ಮಂಟಪ ಅಂತ್ಯಗೊಂಡಿತು.
ಈ ಸಂದರ್ಭ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ದಿವಾಕರ್, ಮೈಸೂರು ಸಶಸ್ತ್ರ ಮೀಸಲು ಪಡೆಯ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ಕೆ.ಬಿದ್ದಪ್ಪ, ರೋಟರಿ ಕ್ಲಬ್ ಆಫ್ ಹೇರಿಟೇಜ್ ಅಧ್ಯಕ್ಷ ಆರ್.ಎನ್. ಶಿವಕುಮಾರ್ ಹಾಗೂ ಇತರರು ಪಾಲ್ಗೊಂಡಿದ್ದರು.