ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಗುರುವಾರ ಶಾಸಕ ದರ್ಶನ್ ಧ್ರುವನಾರಾಯಣ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಶ್ರೀಕಂಠಸ್ವಾಮಿ, ಅಭಿನಂದನ್ ಪಟೇಲ್, ಮಹೇಶ್, ದೇಬೂರು ಅಶೋಕ್, ಪಿಡಿಒ ಶ್ವೇತಾ, ಹುಲ್ಲಹಳ್ಳಿ ಪ್ರಸಾದ್, ಯಜಮಾನ ಸಣ್ಣನಾಯಕ ಇತರರಿದ್ದರು.
ಕಪ್ಪಸೋಗೆ: ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಕೊಡುವುದರ ಜತೆಗೆ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ಟಿಎಸ್ಪಿ ಅನುದಾನದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ. ಸರ್ಕಾರ ಹೇಳಿದಂತೆ ನಡೆದುಕೊಂಡಿದೆ. ಇಂದು ಒಂದೇ ದಿನ ಐದು ಕೋಟಿ 75 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುತ್ತಿದ್ದೇವೆ. ವಿರೋಧ ಪಕ್ಷದವರು ಸರ್ಕಾರದಲ್ಲಿ ಹಣವಿಲ್ಲ ಎಂದು ಟೀಕೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ತಾಲೂಕಿಗೆ 50 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಟಿಎಸ್ಪಿ ಅನುದಾನವೇ ನಾಲ್ಕು ಕೋಟಿ ರೂ. ಬಿಡುಗಡೆಯಾಗಿದೆ. ಸರ್ಕಾರದಲ್ಲಿ ಹಣವಿಲ್ಲದೆ ಹೋದರೆ ಭೂಮಿಪೂಜೆಗಳು ಹೇಗೆ ನಡೆಯುತ್ತವೆ. ವಿರೋಧ ಪಕ್ಷಗಳು ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಜನರನ್ನು ದಿಕ್ಕು ತಪ್ಪಿಸುವುದೇ ಇವರ ಕೆಲಸ. ಕಳೆದ ಆರು ದಿನಗಳಿಂದ ತಾಲೂಕಿನಲ್ಲಿ 37 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಪ್ಪಸೋಗೆ ಗ್ರಾಮಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಶ್ರೀಕಂಠಸ್ವಾಮಿ, ಅಭಿನಂದನ್ ಪಟೇಲ್, ಮಹೇಶ್, ದೇಬೂರು ಅಶೋಕ್, ಪಿಡಿಒ ಶ್ವೇತಾ, ಹುಲ್ಲಹಳ್ಳಿ ಪ್ರಸಾದ್, ಯಜಮಾನ ಸಣ್ಣನಾಯಕ, ಸೋಮಶೆಟ್ಟಿ, ಮೂರ್ತಿ, ಶಿವಪಾದಪ್ಪ, ಗೌ.ಸಿದ್ದಮಲ್ಲಪ್ಪ, ಶ್ರೀನಿವಾಸ್, ವರದರಾಜ್, ಮಲ್ಲಪ್ಪ, ಸುರೇಶ್, ಮಹದೇವ್, ವಿಜಯಲಕ್ಷ್ಮೀ, ದಾಸಯ್ಯ, ಕಪ್ಪಸೋಗೆ ಗ್ರಾಮದ ಯಜಮಾನರು, ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.