ಸರಗೂರಿನಲ್ಲಿ ಶ್ರೀ ಚಾಮುಂಡೇಶ್ವರಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 
ಮೈಸೂರು

ಆಟೋ ಚಾಲಕರ ಭಾಷಾಭಿಮಾನ ಶ್ಲಾಘನೀಯ

ಸರಗೂರು: ಕನ್ನಡ ನಾಡು-ನುಡಿ, ಭಾಷೆಯ ಮೇಲಿರುವ ಆಟೋ ಚಾಲಕರ ಭಾಷಾಭಿಮಾನವನ್ನು ನಾವೆಲ್ಲರೂ ಗೌರವಿಸಬೇಕು. ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ ಸದಾ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಸ್ವಾಮಿ ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಚಾಮುಂಡೇಶ್ವರಿ ಆಟೋ ಚಾಲಕರು ಹಾಗೂ ಮಾಲಿಕರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇತ್ತೀಚಿನ ವರ್ಷಗಳಲ್ಲಿ ಅನ್ಯ ಭಾಷಿಕರ ವಲಸೆಯಿಂದ ಕನ್ನಡ ಭಾಷೆಗೆ ತೊಡಕ್ಕಾಗುತ್ತಿದೆ. ಕನ್ನಡದ ಹಿರಿಮೆ-ಗರಿಮೆ ಸಾರುವ ಕೆಲಸ ಪ್ರತಿಯೊಬ್ಬ ಕನ್ನಡಿಗರ ಗುರಿಯಾಗಬೇಕು. ಕನ್ನಡದ ಅಭಿಮಾನವನ್ನು ಒಂದು ದಿನಕ್ಕೆ ಸಿಮಿತವಾಗಿರದೆ ಪ್ರತಿದಿನವೂ ಕನ್ನಡದ ಅಭಿಮಾನ, ಆಚರಣೆಯಾಗಬೇಕು. ಕನ್ನಡಪರ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಂಡು ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು ಎಂದರು.
ಪಪಂ ಸದಸ್ಯ ಹಾಗೂ ನಾಯಕ ಸಮಾಜದ ಉಪಾಧ್ಯಕ್ಷ ಶ್ರೀನಿವಾಸ ಮಾತನಾಡಿ, ಯಾವುದೇ ಸಹಾಯವಿಲ್ಲದೆ ಸ್ವಯಂ ಪ್ರೇರಣೆಯಿಂದ ಮನೆಯ ಹಬ್ಬದಂತೆ ಕನ್ನಡ ಹಬ್ಬವನ್ನು ಆಚರಿಸುವ ಆಟೋ ಚಾಲಕರ ಪ್ರೇಮ ಮರೆಯಲಾಗದು ಎಂದು ಹೇಳಿದರು.
ಚಾಲಕರು ಪಟ್ಟಣದ ಪ್ರಮುಖ ಬೀದಿಯಲ್ಲಿ ಆಟೋಗಳನ್ನು ಕನ್ನಡ ಬಾವುಟ, ಹಳದಿ, ಕೆಂಪು ಹೂವುಗಳಿಂದ ಅಲಂಕರಿಸಿ ಮೆರವಣಿಗೆ ನಡೆಸಿದರು. ಪಟ್ಟಣ ಪಂಚಾಯಿತಿ ಸದಸ್ಯ ಚಲುವಕೃಷ್ಣ, ವರುಣ್, ಬೀದಿ ಬದಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಜಗದೀಶ್, ರಾಘವೇಂದ್ರ, ಶ್ರೀಕಂಠಸ್ವಾಮಿ, ದೊಡ್ಡಭೈರ, ಕೃಷ್ಣ, ಪಳನಿಸ್ವಾಮಿ, ಚಾಮುಂಡೇಶ್ವರಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ರಮೇಶ್, ಗೌರವಾಧ್ಯಕ್ಷ ಚಿಕ್ಕಸ್ವಾಮಿ, ಉಪಾಧ್ಯಕ್ಷ ಉಮೇಶ್, ಪ್ರಧಾನ ಕಾರ್ಯದರ್ಶಿ ವಿಜಯ್, ಸಹ ಕಾರ್ಯದರ್ಶಿ ಭದ್ರ, ಖಜಾಂಚಿ ಮಹೇಶ್, ಮಾಜಿ ಅಧ್ಯಕ್ಷ ವಸೀಂ, ಸ್ವಾಮಿ, ಹಾಲಪ್ಪ, ಆನಂದ, ರವಿ, ಪರಶುರಾಮ, ಸುದೀಪ್, ಹರೀಶ್, ಯೋಗೀಶ್, ಪ್ರಕಾಶ್, ರವಿ, ಸಂಜೀವ, ನರಸಿಂಹ, ಶ್ರೀನಿವಾಸ್, ಚಂದ್ರ, ಮೂರ್ತಿ, ಶಶಿ, ಕಾರಯ್ಯ ಹಾಜರಿದ್ದರು.