‘ಕಣ್ಕಟ್ ನಗರ’ ಮಕ್ಕಳ ನಾಟಕ ಪ್ರದರ್ಶನ 
ಮೈಸೂರು

ನಾಳೆ ‘ಕಣ್ಕಟ್ ನಗರ’ ಮಕ್ಕಳ ನಾಟಕ ಪ್ರದರ್ಶನ

ಅವಿನಾಶ್ ಜೈನಹಳ್ಳಿ
ಮೈಸೂರು: ಅದಮ್ಯ ರಂಗಶಾಲೆಯ ವತಿಯಿಂದ ‘ಕಣ್ಕಟ್ ನಗರ’ ಎಂಬ ಮಕ್ಕಳ ನಾಟಕ ಪ್ರದರ್ಶನವನ್ನು ಫೆ.7 ರಂದು ಸಂಜೆ 6 ಗಂಟೆಗೆ ನಗರದ ರಂಗಾಯಣದ ಆವರಣದಲ್ಲಿರುವ ಶ್ರೀರಂಗ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದ್ದಾರೆ.
ಮಕ್ಕಳ ನಾಟಕ ಪ್ರದರ್ಶನಕ್ಕೆ ನಿವೃತ್ತ ಪೊಲೀಸ್ ಉಪಾಧೀಕ್ಷಕ (ಡಿವೈಎಸ್‌ಪಿ) ಶಾಂತಮಲ್ಲಪ್ಪ ಚಾಲನೆ ನೀಡಲಿದ್ದು, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪಿ.ಪ್ರಶಾಂತ್‌ಗೌಡ ಅಧ್ಯಕ್ಷತೆ ವಹಿಸುವರು. ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ.ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡುವರು. ಮುಖ್ಯ ಅತಿಥಿಯಾಗಿ ವಿ.ಪಿ.ಪಬ್ಲಿಕ್ ಸ್ಕೂಲ್ನ ಕಾರ್ಯದರ್ಶಿ ರವಿಕುಮಾರ್ ಬೆಕ್ಯಾ ಅವರು ಪಾಲ್ಗೊಳ್ಳುವರು.
ಬಳಿಕ ರಂಗಕರ್ಮಿ ಉಮಾಶ್ರೀ ಜಿ. ಕೂಡ್ಲಿಗಿ ಅವರ ನಿರ್ದೇಶನದಲ್ಲಿ ಅದಮ್ಯ ರಂಗಶಾಲೆಯ ವಾರಾಂತ್ಯ ರಂಗ ತರಬೇತಿ ಶಿಬಿರದ ಮಕ್ಕಳು ಅಭಿನಯಿಸಿರುವ ’ಕಟ್ಕಣ್ ನಗರ’ ಎಂಬ ಮಕ್ಕಳ ನಾಟಕ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.