ಸಾಲಿಗ್ರಾಮ ಪಟ್ಟಣದ ಬಾಹುಬಲಿ ಸಮುದಾಯ ಭವನದಲ್ಲಿ ತಾಲೂಕು ಕುರುಬ ಸಂಘದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕನಕ ಜಯಂತಿ ಪೂರ್ವಭಾವಿ ಸಭೆ. ಎಚ್.ವಿಶ್ವನಾಥ್, ಕೊಪ್ಪಲು ಮಹದೇವ್, ರಾಮೇಗೌಡ, ಮಂಜುನಾಥ್, ರವಿ ಇತರರು ಇದ್ದರು.
ಸಾಲಿಗ್ರಾಮ: ಪಟ್ಟಣದಲ್ಲಿ ನ.8ರಂದು ನಡೆಯಲಿರುವ ಶ್ರೀ ಕನಕ ಜಯಂತಿ ಕಾರ್ಯಕ್ರಮದ ಯಶಸ್ವಿಗೆ ಸಮುದಾಯವರೆಲ್ಲರೂ ಪಕ್ಷ ಭೇದ ಮರೆತು ಒಗ್ಗೂಡಿ ತಾಲೂಕು ಆಡಳಿತಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಲಹೆ ನೀಡಿದರು.
ಪಟ್ಟಣದ ಬಾಹುಬಲಿ ಸಮುದಾಯ ಭವನದಲ್ಲಿ ತಾಲೂಕು ಕುರುಬ ಸಂಘದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕನಕ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕನಕ ಜಯಂತಿ ಕಾರ್ಯಕ್ರಮವನ್ನು ನಾವೆಲ್ಲರೂ ಒಗ್ಗೂಡಿ ನಡೆಸಬೇಕಿದೆ. ಸಮುದಾಯ ಸಂಘಟನೆ ವಿಚಾರ ಬಂದಾಗ ಪಕ್ಷ ರಾಜಕಾರಣ ಮರೆತು ಕೆಲಸ ಮಾಡಬೇಕು. ಸಣ್ಣಪುಟ್ಟ ವ್ಯತ್ಯಾಸಗಳಾದರೂ ಅವುಗಳನ್ನು ಸಂಘದ ಪದಾಧಿಕಾರಿಗಳು ಸರಿದೂಗಿಸಿಕೊಂಡು ಸಂಘವನ್ನು ಮುನ್ನಡೆಸುವ ಕೆಲಸ ಮಾಡಿ ಎಂದು ಹೇಳಿದರು.
ಸಾಲಿಗ್ರಾಮ ತಾಲೂಕು ಕುರುಬ ಸಂಘದ ಅಧ್ಯಕ್ಷ ಸಿದ್ದರಾಮೇಗೌಡ ಮಾತನಾಡಿ, ಶಾಸಕರ ಡಿ.ರವಿಶಂಕರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲು ಸಂಘದ ಎಲ್ಲ ಪದಾಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕು. ಎರಡು ತಾಲೂಕಿನಿಂದ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಜತೆಗೆ ಸಮಾಜದ ಎಲ್ಲರನ್ನೂ ಆಹ್ವಾನಿಸುವ ಕೆಲಸವಾಗಬೇಕಿದೆ ಎಂದರು.
ಶಾಸಕ ಡಿ.ರವಿಶಂಕರ್, ಎಂಎಲ್‌ಸಿ ಎಚ್.ವಿಶ್ವನಾಥ್ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮಿಗೌಡ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಸುತ್ತಿದ್ದು, ತಾಲೂಕು ಆಡಳಿತಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಕಾಳಮ್ಮನ ಕೊಪ್ಪಲು ಮಹದೇವ್, ಉಪಾಧ್ಯಕ್ಷರಾದ ರಾಮೇಗೌಡ, ಮಂಜುನಾಥ್, ಖಜಾಂಚಿ ರವಿ, ಪಾಪೇಗೌಡ, ಸುಬ್ಬೇಗೌಡ, ಕೃಷ್ಣೇಗೌಡ, ಪಾಲಾಕ್ಷ , ರಂಗಸ್ವಾಮಿ ರಂಗೇಗೌಡ, ನಾಗರಾಜೇಗೌಡ, ಕುಮಾರ್ ಗೋವಿಂದರಾಜು, ಬಲರಾಮಗೌಡ, ಕುಮಾರ್, ಯೋಗಣ್ಣ, ಸಿ.ಕೆ.ಕುಮಾರ್, ಉಮಾಶಂಕರ್, ಕೃಷ್ಣಮೂರ್ತಿ, ಎಲ್.ಎಂ.ಕೃಷ್ಣೇಗೌಡ, ಕೃಷ್ಣ, ಕುಮಾರ, ಸತೀಶ್, ರಾಜೇಗೌಡ, ಸಂದೀಪ್, ಜೈ ಕುಮಾರ್, ಶಿವರಾಜೇಗೌಡ, ಸ್ವಾಮಿಗೌಡ, ರಾಮಕೃಷ್ಣ, ನಾಗರಾಜು, ಮಧುಸೂದನ, ಚೇತನ್, ಶಿವರಾಜ್, ನಾಗೇಶ್, ಗುಣಪಾಲ್, ಅರುಣ್ ರಾಜ್, ರವಿ, ಮಹದೇವ್, ಲೋಕೇಶ್ ದಿಲೀಪ್, ವಸಂತ್, ಜಗದೀಶ್, ವಿನೋದ್ ಇತರರು ಇದ್ದರು.