ಕಣಗಾಲು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಹಾರಂಗಿ ಇಲಾಖೆ ಎಇಇ ಗೋಕುಲ್ ಕುಡುವ ಅವರಿಗೆ ಪಿಡಿಒ ಕೆ.ಗಣೇಶ್ ಅಭಿನಂದನೆ ಸಲ್ಲಿಸಿದರು.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕು ಕಣಗಾಲು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಅಧಿಕಾರ ಮುಗಿದ ಹಿನ್ನೆಲೆಯಲ್ಲಿ ಹಾರಂಗಿ ಇಲಾಖೆಯ ಎಇಇ ಗೋಕುಲ್ ಕುಡುವ ಅವರು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಕೊಂಡರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಗಣೇಶ್ ಆಡಳಿತಾಧಿಕಾರಿಯನ್ನು ಸ್ವಾಗತಿಸಿ ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ಕಣಗಾಲು ಗ್ರಾಮ ಪಂಚಾಯಿತಿಯು ಸಾರ್ವಜನರಿಗೆ ಸೇವೆ ಹಾಗೂ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುವ ಮೂಲಕ ಕೆಲಸ ನಿರ್ವಹಿಸುತ್ತಿದೆ. ನರೇಗಾ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ 2023-24ರಲ್ಲಿ ಗಾಂಧಿ ಪುರಸ್ಕಾರವನ್ನು ಮುಡಿಗೇರಿಸಿಕೊಂಡು ತಾಲೂಕಿನಲ್ಲಿ ಮಾದರಿ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪಾಂಡು, ಕ್ಲರ್ಕ್ ವಿಶ್ವನಾಥ್, ಸಿಬ್ಬಂದಿ ಸೋಮಶೇಖರ್, ಜಯಂತ್ ಶೆಟ್ಟಿ, ರಂಗಶೆಟ್ಟಿ, ಪ್ರಕಾಶ್ ನಾಯಕ್, ನಾಗರಾಜುಶೆಟ್ಟಿ, ಮಹೇಂದ್ರ, ದೇವರಾಜು, ಗಣೇಶಾಚಾರಿ ಇತರರು ಇದ್ದರು.