ಮೈಸೂರು: ನಗರದ ಕಲಾಮಂದಿರದಲ್ಲಿ ಶನಿವಾರ ನೃತ್ಯ ವರ್ಣ ಕಲಾಸೌರಭ ವತಿಯಿಂದ ಆಯೋಜಿಸಿದ್ದ ಕಲಾಧಾರಪನಂ ಕಾರ್ಯಕ್ರಮ ಪ್ರೇಕ್ಷಕರ ಹೃದಯ ಗೆದ್ದಿತು. ಕಲಾವಿದರು ಪ್ರದರ್ಶನದ ಜತೆಗೆ ಲಯಬದ್ಧವಾಗಿ ಹಾಡುತ್ತಾ ನೃತ್ಯ ಪ್ರದರ್ಶನ ನೀಡಿದರು. ಜರ್ನಲ್, ಡ್ಯಾಂಗ್ ಚೆನ್, ಗಿಂಾಲಿನ್, ಡಂಕರ್ ಎಂಬ ವಾದ್ಯ ಪರಿಕರಗಳ ಇಂಪಾದ ಸಂಗೀತಕ್ಕೆ ಪ್ರೇಕ್ಷಕರು ತಲೆದೂಗಿದರು.
ವಿಮೋವೆ ಫೌಂಡೇಷನ್ ಸಂಸ್ಥಾಪಕ ವಿನಂ್ ಶಿಂಧೆ ಕಾರ್ಯಕ್ರಮ ಉದ್ಘಾಟಿಸಿ, ಕಲಾವಿದರಿಗೆ ಶುಭ ಕೋರಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮಾತನಾಡಿದರು. ನೃತ್ಯ ವರ್ಣ ಕಲಾ ಸೌರಭ ಸಂಸ್ಥಾಪಕ ನಿರ್ದೇಶಕಿ ಕಲ್ಪಿತ ಪ್ರಶಾಂತ್ ಇತರರಿದ್ದರು.