sadvidya college 
ಮೈಸೂರು

ಸದ್ವಿದ್ಯಾ ಕಾಲೇಜಿನ ಕೆ.ಚಿತ್ರಾ ಸ್ಫೂರ್ತಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್

ನಗರದ ನಾರಾಯಣ ಶಾಸಿ ರಸ್ತೆಯ ಸದ್ವಿದ್ಯಾ ಕಾಲೇಜಿನ ಕೆ.ಚಿತ್ರಾ ಸ್ಫೂರ್ತಿ ವಾಣಿಜ್ಯ ವಿಷಯದಲ್ಲಿ 597 (ಶೇ.99.50) ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ರ‌್ಯಾಂಕ್ ಪಡೆಯುವ ಜತೆಗೆ ಜಿಲ್ಲೆಗೆ ಟಾಪರ್ ಆಗಿದ್ದಾಳೆ.
ಬೇಸಿಕ್ ಮ್ಯಾಥ್ಸ್, ಬಿಜಿನೆಸ್, ಅಕೌಂಟ್ಸ್ ಹಾಗೂ ಸ್ಟಾಟಿಸ್ಟಿಕ್ಸ್‌ನಲ್ಲಿ 100ಕ್ಕೆ 100 ಅಂಕ ಪಡೆದು ಗಮನ ಸೆಳೆದಿದ್ದಾರೆ. ಕನ್ನಡದಲ್ಲಿ 98 ಹಾಗೂ ಇಂಗ್ಲಿಷ್‌ನಲ್ಲಿ 99 ಅಂಕ ಪಡೆದಿದ್ದಾಳೆ.
ಇವರು ನಂಜನಗೂಡಿನ ಅಂಗಡಿ ಬೀದಿಯಲ್ಲಿರುವ ಕೆ.ಎಸ್.ಕೃಷ್ಣಮೂರ್ತಿ ಹಾಗೂ ಜ್ಯೋತಿ ದಂಪತಿ ಪುತ್ರಿ. ಕೃಷ್ಣಮೂರ್ತಿ ಪೂಜಾ ಸ್ಟೋರ್ಸ್‌ ನಡೆಸುತ್ತಿದ್ದು, ತಾಯಿ ಜ್ಯೋತಿ ಗೃಹಿಣಿಯಾಗಿದ್ದಾರೆ.
‘ರಾಜ್ಯಕ್ಕೆ ಮೂರನೇ ಹಾಗೂ ಜಿಲ್ಲೆಗೆ ಮೊದಲ ರ‌್ಯಾಂಕ್ ಬಂದಿರುವುದಕ್ಕೆ ಖುಷಿಯಾಗಿದೆ. ಎಲ್ಲೂ ಪಾಠಕ್ಕೆ ಹೋಗುತ್ತಿರಲಿಲ್ಲ. ತರಗತಿಯಲ್ಲಿ ಪಾಠವನ್ನು ಚೆನ್ನಾಗಿ ಕೇಳುತ್ತಿದ್ದೆ. ಉಪನ್ಯಾಸಕರು ತುಂಬಾ ನೆರವು ನೀಡಿದರು. ಸೂಕ್ತ ಮಾರ್ಗದರ್ಶನ ನೀಡಿದರು. ಬೆಳಗ್ಗೆ 3.30ರಿಂದ 5.30ರವರೆಗೆ ಓದುತ್ತಿದ್ದೆ. ಪರೀಕ್ಷೆ ಸಮಯದಲ್ಲಿ 5 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಕಿರು ಪರೀಕ್ಷೆಯಿಂದಲೇ ಪರೀಕ್ಷೆ ಬರೆಯುವ ಬಗೆಯನ್ನು ವಿವರಿಸಿದರು. ಎಷ್ಟು ಬಾರಿ ಕೇಳಿದರೂ ಕೋಪಗೊಳ್ಳದೆ ತಾಳ್ಮೆಯಿಂದ ಹೇಳಿಕೊಡುತ್ತಿದ್ದರು. ಮನೆಯಲ್ಲಿ ಅಮ್ಮ ಹಾಗೂ ಅತ್ತಿಗೆ ಕೆಲವೊಂದು ಅರ್ಥವಾಗದ ವಿಷಯವನ್ನು ಹೇಳುತ್ತಿದ್ದರು.
ಸಿಎ ಮಾಡಬೇಕೆಂಬ ಆಸೆ ಇದೆ. ಡಿಬೇಟ್, ವಾಲಿಬಾಲ್, ಚಿತ್ರಕಲೆಯಲ್ಲೂ ಆಸಕ್ತಿ ಇದೆ. ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯುತ್ತಿದ್ದೆ. ನಿತ್ಯ ನಂಜನಗೂಡಿನಿಂದ ಓಡಾಡುತ್ತಿದೆ. ರಾಜ್ಯಕ್ಕೆ ನಾಲ್ಕನೇ ರ‌್ಯಾಂಕ್ ಪಡೆದಿರುವುದಕ್ಕೆ ಖುಷಿಯಾಗಿದೆ. ಕನ್ನಡದಲ್ಲಿ ನನಗೆ 100 ಅಂಕ ಬರಬೇಕು. ಆದರೆ, 98 ಅಂಕ ಬಂದಿದ್ದು, ಕನ್ನಡವನ್ನು ಮರು ಮೌಲ್ಯ ಮಾಪನಕ್ಕೆ ಹಾಕುತ್ತೇನೆ’ ಎಂದು ಕೆ.ಚಿತ್ರಾ ಸ್ಫೂರ್ತಿ ತಿಳಿಸಿದ್ದಾಳೆ.