ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ರಾಜ್ಯ ಮಟ್ಟದ ವಿಸ್ತಾರ ಉತ್ಸವದ ಲಾಂಛನವನ್ನು ಗಾಯಕ ದೀಪಕ್ ನಾಯಕ್ ಅನಾವರಣಗೊಳಿಸಿದರು. ಬಿ.ನಿರಂಜನಮೂರ್ತಿ, ಸುಷ್ಮಾ ನಾಣಯ್ಯ, ಡಾ.ರೇಚಣ್ಣ ಹಾಗೂ ಇತರರು ಇದ್ದರು. 
ಮೈಸೂರು

ಜೆಎಸ್‌ಎಸ್ ಮಹಿಳಾ ಕಾಲೇಜು : ವಿಸ್ತಾರ ಉತ್ಸವದ ಲಾಂಛನ ಅನಾವರಣ

ಮೈಸೂರು: ಕಾಲೇಜಿನ ಹಬ್ಬಗಳು ಒಗ್ಗಟ್ಟು ಮತ್ತು ಸೌಹಾರ್ದ ಭಾವನೆ ಬೆಳೆಸಲು ಉತ್ತಮ ವೇದಿಕೆಗಳಾಗಿವೆ ಎಂದು ಜೆಎಸ್‌ಎಸ್ ಮಹಾವಿದ್ಯಾ ಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಅಭಿಪ್ರಾಯಪಟ್ಟರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಸೈನ್ಸ್ ರೋಸ್ಟ್ರಮ್ ವತಿಯಿಂದ ರಾಜ್ಯ ಮಟ್ಟದ ವಿಸ್ತಾರ ಉತ್ಸವ-2026 ಲಾಂಛನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಸ್ತಾರ ಎಂಬುದು ವಿದ್ಯಾರ್ಥಿಗಳಲ್ಲಿರುವ ಕ್ರಿಯಾಶೀಲತೆ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಲಾಂಛನ ಅನಾವರಣಗೊಳಿಸಿದ ಗಾಯಕ ದೀಪಕ್ ನಾಯಕ್ ಮಾತನಾಡುತ್ತಾ, ವಿದ್ಯಾರ್ಥಿಗಳು ಫಲಿತಾಂಶದ ಬಗ್ಗೆ ಯೋಚಿಸದೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಂದರು. ಫೆಸ್ಟ್‌ನ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಲಾಂಛನಗಳನ್ನೂ ಅನಾವರಣಗೊಳಿಸಲಾಯಿತು ವಿಸ್ತಾರ ಪ್ರದರ್ಶಿನಿ, ನಕ್ಷತ್ರ ನರ್ತನಂ, ಬುದ್ಧಿ ವರ್ದಿನಿ, ಯುಕ್ತಿ ಪ್ರಹಾರ ಮತ್ತು ಪುನರ್ ನಿರ್ಮಾಣ ಅನಾವರಣಗೊಳಿಸಿದರು.
ನಟಿ ಸುಷ್ಮಾ ನಾಣಯ್ಯ, ಪ್ರಾಂಶುಪಾಲ ಡಾ.ರೇಚಣ್ಣ, ಪರೀಕ್ಷಾ ನಿಯಂತ್ರಣಾಧಿಕಾರಿ ಎಂ.ಎಂ. ಸ್ವಾಮಿ, ಸಂಚಾಲಕರಾದ ಡಿ.ಬಿ. ಯಶವಂತ್,ಪಿ.ಆರ್. ರಾಜೇಶ್ವರಿ ಉಪಸ್ಥಿತರಿದ್ದರು.