ನಂಜನಗೂಡು ತಾಂಡವಪುರದ ಎಂಐಟಿ ಕಾಲೇಜಿನಲ್ಲಿ ಕ್ಯೂ ಸ್ಪೈಡರ್ಸ್ ಕಂಪನಿಯಿಂದ ಗುರುವಾರ ಕ್ಯಾಂಪಸ್ ನೇಮಕಾತಿ ಆಯೋಜಿಸಲಾಗಿತ್ತು.
ತಾಲೂಕಿನ ಪಾಂಡವಪುರ ಎಂಐಟಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕ್ಯಾಂಪಸ್ ನೇಮಕಾತಿಯಲ್ಲಿ ಕಾಲೇಜಿನ 113 ಮಂದಿ ಆಯ್ಕೆಯಾಗಿದ್ದರೆ ಎಂದು ಪ್ರಾಂಶುಪಾಲ ವೈ.ಟಿ.ಕೃಷ್ಣಗೌಡ ಮಾಹಿತಿ ನೀಡಿದರು.
ಕ್ಯೂ ಸ್ಪೈಡರ್ಸ್ ಕಂಪನಿಯಿಂದ ಆಯೋಜಿಸಿದ್ದ ಕ್ಯಾಂಪಸ್ ನೇಮಕಾತಿ ಸಂದರ್ಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಫ್ಟ್‌ವೇರ್ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಕೈಗಾರಿಕಾ ಆಧಾರಿತ ತರಬೇತಿ ಮತ್ತು ಉದ್ಯೋಗಾವಕಾಶ ನಿಟ್ಟಿನಲ್ಲಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನೇಮಕಾತಿ ವೇಳೆ ಎಂಐಟಿಯ ವಿವಿಧ ವಿಭಾಗ ಮತ್ತು ಎಂಸಿಎ ವಿಭಾಗದ ಒಟ್ಟು 395 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 113 ವಿದ್ಯಾರ್ಥಿಗಳು ಕಾಲೇಜಿನಿಂದಲೇ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಕ್ಯೂ ಸ್ಪೈಡರ್ಸ್ ಸಾಫ್ಟ್‌ವೇರ್ ಸಲ್ಯೂಷನ್ಸ್ ಪ್ರೈವೇಟ್ ಇಂಡಿಯಾ ಲಿ. ಸಿಇಒ ನವೀನಗೌಡ ಮಾತನಾಡಿ, 1998ರಲ್ಲಿ ಎಂಐಟಿಯ ಬಿಇ ಮೆಕಾನಿಕಲ್ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದೇನೆ. ಆಗ ನಮ್ಮ ಪ್ರಾಂಶುಪಾಲರಾಗಿದ್ದ ಕೃಷ್ಣೇಗೌಡ ಮಾರ್ಗದರ್ಶನ ಮತ್ತು ಸಹಕಾರದಿಂದ ಪ್ರಸ್ತುತ ನೂತನ ಕಂಪನಿ ಕಟ್ಟಿದ್ದೇನೆ. ನಮ್ಮ ಕಾಲೇಜಿನಿಂದಲೇ 113 ವಿದ್ಯಾರ್ಥಿಗಳನ್ನು ಆಯ್ಕೆ ಆಗಿರುವುದು ಸಂತಸದ ಸಂಗತಿ. ಈ ಮೂಲಕ ಪಾಠ ಹೇಳಿಕೊಟ್ಟ ಗುರುಗಳ ಋಣ ತೀರಿಸಲು ಉತ್ತಮ ಅವಕಾಶವಾಗಿದೆ ಎಂದರು.