ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಮನೆ-ಮನೆ ಭೇಟಿ ಮೂಲಕ ಜಾಬ್ ಕಾರ್ಡ್ ಮೇಳ, ಆಟೋ ಪ್ರಚಾರ ಕಾರ್ಯಕ್ರಮಕ್ಕೆ ಪಿಡಿಒ ಶ್ರೀದೇವಿ ಚಾಲನೆ ನೀಡಿದರು. ತಾಲೂಕು ಐಇಸಿ ಸಂಯೋಜಕ ರವಿಕುಮಾರ್, ಬಿಲ್ ಕಲೆಕ್ಟರ್ ರಮಣಯ್ಯ, ಕ್ಲರ್ಕ್ ಮಹೇಂದ್ರ ಸೇರಿದಂತೆ ಸಿಬ್ಬಂದಿ ಇದ್ದರು. 
ಮೈಸೂರು

ಜಾಬ್ ಕಾರ್ಡ್ ಮೇಳದ ಸದುಪಯೋಗ ಮಾಡಿಕೊಳ್ಳಿ

ಎ. ಆರ್. ರಘುರಾಮ
ಬೆಟ್ಟದಪುರ: ಗ್ರಾ.ಪಂ ವ್ಯಾಪ್ತಿಯ ಸಾರ್ವಜನಿಕರು ಜಾಬ್ ಕಾರ್ಡ್ ಮಾಡಿಸಿಕೊಂಡು ಉದ್ಯೋಗ ಪಡೆದುಕೊಳ್ಳಬೇಕು ಎಂದು ಚಪ್ಪರದಹಳ್ಳಿ ಗ್ರಾ.ಪಂ ಪಿಡಿಒ ಕೆ.ಕೆ. ಶ್ರೀದೇವಿ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿರುವ ಜಾಬ್ ಕಾರ್ಡ್ ಮೇಳ, ಮನೆ-ಮನೆ ಭೇಟಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಆ.15 ರಿಂದ ಆರಂಭವಾಗಿರುವ ಜಾಬ್ ಕಾರ್ಡ್ ಮೇಳ ಸೆ.15ರವರೆಗೆ ನಡೆಯಲಿದೆ. ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 125 ದಿನಗಳ ಉದ್ಯೋಗ ದೊರೆಯಲಿದೆ. ಇದರಲ್ಲಿ 382 ರೂ. ಕೂಲಿ ದೊರೆಯಲಿದೆ. ಈಗಾಗಲೇ, ಜಾಬ್ ಕಾರ್ಡ್ ಹೊಂದಿರುವವರ ಇ-ಕೆವೈಸಿ ಅಪ್ಡೇಟ್ ಮಾಡಲಾಗಿದೆ. ಜನರು ಉದ್ಯೋಗಕ್ಕಾಗಿ ಬೇರೆಡೆಗೆ ವಲಸೆ ಹೋಗುವುದನ್ನು ತಪ್ಪಿಸಿ, ಸ್ಥಳೀಯವಾಗಿ ಉದ್ಯೋಗ ನೀಡಲಾಗುವುದು ಎಂದವರು ವಿವರಿಸಿದರು.
ಒಂದು ಕುಟುಂಬವು ಒಟ್ಟಾರೆ ಆರ್ಥಿಕ ವರ್ಷದಲ್ಲಿ 47,750 ರೂ. ಗಳನ್ನು ಗಳಿಸಬಹುದಾಗಿದೆ. ವೈಯಕ್ತಿಕ ಕಾಮಗಾರಿ ನಿರ್ಮಿಸಿಕೊಳ್ಳುವ ಮೂಲಕ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ತಾಲೂಕು ಐಇಸಿ ಸಂಯೋಜಕ ರವಿಕುಮಾರ್, ಬಿಲ್ ಕಲೆಕ್ಟರ್ ರಮಣಯ್ಯ, ಕ್ಲರ್ಕ್ ಮಹೇಂದ್ರ ಸೇರಿದಂತೆ ಸಿಬ್ಬಂದಿ ಇದ್ದರು.