ಕಳ್ಳತನ ಪ್ರಕರಣ 
ಮೈಸೂರು

ಮೈಸೂರಿನಲ್ಲಿ ಹಾಡಹಗಲೇ ಚಿನ್ನಾಭರಣ ಕಳವು

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯೊಬ್ಬರು ಮನೆಯಲ್ಲಿ ಮಲಗಿದ್ದಾಗಲೇ ಬಾಗಿಲು ಬೀಗ ಮೀಟಿದ ಖದೀಮರು
  • 95 ಸಾವಿರ ರೂ. ಮೌಲ್ಯದ 2 ಚಿನ್ನ ಕಳವು
ಮೈಸೂರು: ಮಹಿಳೆಯೊಬ್ಬರು ಮನೆಯಲ್ಲಿ ಮಲಗಿದ್ದಾಗಲೇ ಖದೀಮರು ಬಾಗಿಲು ಬೀಗ ಮೀಟಿ ಹಾಡಹಗಲೇ ಕಳ್ಳತನ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 
ದತ್ತನಗರ ನಿವಾಸಿ, ಚಾಲಕ ನಾಗೇಂದ್ರ ಅವರ ಮನೆಯಲ್ಲಿ ನ.1ರಂದು ಮಧ್ಯಾಹ್ನ ಕಳ್ಳತನ ನಡೆದಿದೆ. ಆದರೆ, ನ.12ರಂದು  ಕೆ.ಆರ್.ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಅಂದು ಸರ್ಕಾರಿ ರಜೆ ಇದ್ದ ಕಾರಣಕ್ಕೆ ಮನೆಯಲ್ಲೇ ನಾಗೇಂದ್ರ ಇದ್ದರು. ಪತ್ನಿಯೂ ತಾವು ಕೆಲಸ ಮಾಡುವ ಸ್ಥಳದಲ್ಲಿ ರಾಜ್ಯೋತ್ಸವದಲ್ಲಿ ಪಾಲ್ಗೊಂಡು, ಮನೆಗೆ ಬಂದು ಕೊಠಡಿಯಲ್ಲಿ ಮಲಗಿದ್ದರು. ಮಧ್ಯಾಹ್ನ 1.30ರ ವೇಳೆಗೆ ಮನೆಗೆ ಬೀಗ ಹಾಕಿಕೊಂಡು, ಸ್ನೇಹಿತನನ್ನು ಭೇಟಿ ಮಾಡಲು ಹೋಗಿದ್ದೆ. ಮಧ್ಯಾಹ್ನ 2.45ರ ವೇಳೆಗೆ ವಾಪಸಾದಾಗ ಮನೆಯ ಬಾಗಿಲು ಸ್ವಲ್ಪ ತೆರೆದಿತ್ತು. 
ಅದರ ಲಾಕ್ ಮುರಿದಿದ್ದರಿಂದ ಗಾಬರಿಯಿಂದ ಒಳಹೋಗಿ ನೋಡಿದಾಗ ಹಾಲ್‌ನಲ್ಲಿದ್ದ ಬೀರುವಿನ ಲಾಕರ್ ಮೀಟಿ, ತೆಗೆಯಲಾಗಿತ್ತು. ಅದರಲ್ಲಿದ್ದ 25 ಸಾವಿರ ರೂ. ನಗದು ಹಾಗೂ 95 ಸಾವಿರ ರೂ. ಮೌಲ್ಯದ 2 ಚಿನ್ನದ ಉಂಗುರಗಳನ್ನು ದೋಚಲಾಗಿದೆ. 
ಇದು ಪತ್ನಿಯ ಗಮನಕ್ಕೂ ಬಂದಿಲ್ಲ ಎಂದು ನಾಗೇಂದ್ರ, ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.