ಸರಗೂರು ತಾಲೂಕಿನ ಮಾದಾಪುರ ಗ್ರಾಮದ ಬಳಿ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. 
ಮೈಸೂರು

27ರಂದು ಜನರೊಂದಿಗೆ ಜನತಾದಳ ಕಾರ್ಯಕ್ರಮ

ಲೋಕೇಶ್ ಮನು. ಡಿ
ಸರಗೂರು: ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮುಂಬರುವ ಜಿಲ್ಲಾ, ತಾಪಂ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡವಂತೆ ಪಕ್ಷದ ಮುಖಂಡ ಕೆ.ಎಂ.ಕೃಷ್ಣನಾಯಕ ತಿಳಿಸಿದರು.
ಮಾ.27ರಂದು ಜನರೊಂದಿಗೆ ಜನತದಳ ಕಾರ್ಯಕ್ರಮಕ್ಕೆ ಎಚ್.ಡಿ.ಕೋಟೆ ತಾಲೂಕಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಾದಪುರ ಗ್ರಾಮ ಬಳಿ ಇರುವ ಕೃಷ್ಣನಾಯಕ ಅವರ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಸಭೆಯಲ್ಲಿ ಮಾತನಾಡಿದರು.
ಮಾ. 27ರಂದು ಎಚ್.ಡಿ.ಕೋಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಾಲೂಕಿನಿಂದ 20ರಿಂದ 25 ಸಾವಿರ ಜನರು ಭಾಗವಹಿಸುವಂತೆ ಗಮನ ಹರಿಸಲು ಕಾರ್ಯಕರ್ತರಿಗೆ ಸೂಚಿಸಿದರು.
ಪಕ್ಷದ ತತ್ವದ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದ್ದು, ತಳಮಟ್ಟದಲ್ಲಿ ಸಂಟನೆ ಬಲಪಡಿಸಿದರೆ ಎಲ್ಲ ಚುನಾವಣೆಯಲ್ಲಿ ಯಶಸ್ಸು ಸಾಧಿಸುವುದು ಬಹಳ ಸುಲಭ. ಈ ಬಾರಿ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಜಯಸಾಲಿಯಾಗಿದ್ದಾರೆ. ಇದು ಮುಂದಿನ ಚುನಾವಣೆಗಳಿಗೆ ದಿಕ್ಕೂಚಿಯಾಗಿದೆ ಎಂದು ತಿಳಿಸಿದರು.
ಜೆಡಿಎಸ್‌ನ ಸರಗೂರು ತಾಲೂಕು ಅಧ್ಯಕ್ಷ ಜಿ.ಗೋಪಾಲಸ್ವಾಮಿ ಮಾತನಾಡಿ, ಎರಡು ತಾಲೂಕಿನಿಂದ ಕಾರ್ಯಕ್ರಮಕ್ಕೆ 20 ರಿಂದ 25ಕ್ಕೂ ಬಸ್ ಹಾಗೂ ಇತರ ವಾಹನಗಳಲ್ಲಿ 10,000 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ಎಚ್.ಡಿ.ಕೋಟೆ ಜೆಡಿಎಸ್ ಪಕ್ಷದ ಅಧ್ಯಕ್ಷ ರಾಜೇಂದ್ರ, ತಾಪಂ ಸದ್ಯಸ್ಯ ಮಳಲಿ ಶಾಂತಕುಮಾರ, ಮುಖಂಡರಾದ ಸಿ.ವಿ.ನಾಗರಾಜು, ಹರೀಶ್‌ಗೌಡ, ಯೋಗಾನರಸಿಂಹ, ನರಸಿಂಹೇಗೌಡ, ಕಾಳಿಹುಂಡಿ ಸಿದ್ದೇಗೌಡ, ಉದಯಕುಮಾರ, ಮಹೇಂದ್ರ, ಸಾಗರೆ ಶಂಕರ್, ಪುರದಕಟ್ಟೆ ಬೆಟ್ಟನಾಯಕ, ವಾಲ್ಮೀಕಿ ಸಿದ್ದರಾಜು, ಮುಳ್ಳೂರು ನಿಂಗರಾಜು, ಪ್ರಕಾಶ್, ಮಹೇಶ್, ಎಂ.ಬಿ.ಜಯರಾಮ್, ಕಾಟವಾಳು ಪರಶಿವಮೂರ್ತಿ, ಪುಟ್ಟ ಹನುಮಯ್ಯ, ಶಿವಣ್ಣ, ಚನ್ನೀಪುರ ಮಲ್ಲೇಶ್, ನಟರಾಜು, ಎಂ.ಡಿ.ಮಂಜಯ್ಯ, ಶ್ಯಾಮ್ ಸುದಂರ್, ಹನುಮಂತಯ್ಯ, ನಾಗರಾಜು, ವೆಂಕಟಾಚಲ, ನಾಗೇಶ್, ಮಹದೇವಸ್ವಾಮಿ, ವಿನೋದ್ ಇತರರು ಭಾಗವಹಿಸಿದ್ದರು.