ತಿ.ನರಸೀಪುರ ತಾಲೂಕು ಆಡಳಿತ ಸೌಧದ ಎದುರು ಜೈ ಕನ್ನಡಾಂಬೆ ಮಹಾಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿ.ಮುರುಗನ್, ಸುರೇಶ್, ಮಲ್ಲೇಶ್, ಮಹೇಶ್, ಶಬರಿ, ಎಸ್.ಸತೀಶ್, ಶಿಲ್ಪಾ, ಹರೀಶ್, ಕೆ.ಶೋಭಾ, ಇಂದುಮತಿ, ರಮೇಶ್ ಇದ್ದರು.
ತಿ.ನರಸೀಪುರ: ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ಆಗಬೇಕು, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವಂತೆ ಆಗ್ರಹಿಸಿ ಪಟ್ಟಣದಲ್ಲಿ ಮಂಗಳವಾರ ಜೈ ಕನ್ನಡಾಂಬೆ ಮಹಾಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಶ್ರೀ ಗುಂಜಾನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೇರಿದ ಸಂಘಟನೆಯ ಪದಾಧಿಕಾರಿಗಳು ತಾಲೂಕು ಆಡಳಿತಸೌಧಕ್ಕೆ ಜನರನ್ನು ಅಲೆಸುತ್ತಿರುವ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಾರುಕಟ್ಟೆ ರಸ್ತೆ ಮೂಲಕ ಭಗವಾನ್ ವೃತ್ತ, ಲಿಂಕ್ ರಸ್ತೆ, ಖಾಸಗಿ ಬಸ್ ಸ್ಟ್ಯಾಂಡ್ ವೃತ್ತ, ವಿದ್ಯೋದಯ ಕಾಲೇಜು ರಸ್ತೆ ಮಾರ್ಗವಾಗಿ ಕಾಲು ನಡಿಗೆಯಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿ ತಲುಪಿದರು. ತಾಲೂಕು ಕಚೇರಿ ಎದುರು ಧರಣಿ ಕುಳಿತು ರಾಜ್ಯ ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆ ರಾಜ್ಯಾಧ್ಯಕ್ಷ ಜಿ.ಮುರುಗನ್ ಮಾತನಾಡಿ, ತಾಲೂಕು ಕಚೇರಿಗೆ ವೃದ್ಧರು, ಅಂಗವಿಕಲರು, ವಿದ್ಯಾರ್ಥಿಗಳು, ಮಹಿಳೆಯರು ಕೆಲಸ ಕಾರ್ಯಗಳ ನಿಮಿತ್ತ ಕಚೇರಿಗೆ ಆಗಮಿಸುತ್ತಾರೆ. ಸಿಬ್ಬಂದಿ ಸರ್ವರ್ ಡೌನ್ ಎಂಬ ಕಾರಣ ನೀಡುತ್ತಾ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡುತ್ತಾರೆ. ಜನರು ತಮ್ಮ ಕೆಲಸಗಳನ್ನು ಬಿಟ್ಟು ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ ಎಂದು ದೂರಿದರು.
ಮಹಿಳೆಯರ ಮೇಲೆ ನಿತ್ಯ ದೌರ್ಜನ್ಯಗಳು ನಡೆಯುತ್ತಿವೆ. ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಬಳಿಕ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅವರಿಗೆ ಮನವಿ ಸಲ್ಲಿಸಿದರು.
ಜೈ ಕನ್ನಡಾಂಬೆ ಮಹಾಸೇನೆ ರಾಜ್ಯ ಸಂಚಾಲಕ ಸುರೇಶ್, ಜಂಟಿ ಸಹ ಕಾರ್ಯದರ್ಶಿ ಮಲ್ಲೇಶ್, ಕಾರ್ಯದರ್ಶಿ ಮಹೇಶ್, ಮಂಡ್ಯ ಜಿಲ್ಲಾಧ್ಯಕ್ಷ ಶಬರಿ, ರಾಜ್ಯ ಸಂಸ್ಥಾಪಕ ಎಸ್.ಸತೀಶ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶಿಲ್ಪಾ, ರಾಜ್ಯ ಕೋಶಾಧ್ಯಕ್ಷ ಹರೀಶ್, ರಾಜ್ಯ ಖಜಾಂಚಿ ಇಂದುಮತಿ, ರಾಜ್ಯ ಜಂಟಿ ಕಾರ್ಯದರ್ಶಿ ರಮೇಶ್, ರಾಜ್ಯ ಸಮಿತಿ ಗೌರವಾಧ್ಯಕ್ಷ ಸುರೇಶ್, ನಿರ್ದೇಶಕರಾದ ಪ್ರದೀಪ್, ಗಿರೀಶ್, ಟಿ.ದಾಸರಹಳ್ಳಿ ಮಹಿಳಾ ಘಟಕದ ಅಧ್ಯಕ್ಷೆ ಪಂಕಜಾ, ಮೈಸೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೋಪಾಲ್, ಮೈಸೂರಿನ ಎನ್.ಆರ್.ಮೊಹಲ್ಲಾ ಕ್ಷೇತ್ರಾಧ್ಯಕ್ಷ ರವಿಶಂಕರ್, ಜೆ.ಪಿ.ನಗರ ಕ್ಷೇತ್ರ ಅಧ್ಯಕ್ಷ ಕೃಷ್ಣ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕೆ.ಶೋಭಾ, ಗೌರವಾಧ್ಯಕ್ಷೆ ಸುಶೀಲಮ್ಮ, ಪ್ರಧಾನ ಕಾರ್ಯದರ್ಶಿ ಶೃತಿ, ಸಹ ಪ್ರಧಾನ ಕಾರ್ಯದರ್ಶಿ ಕಾಂಚನಾ, ಕಾರ್ಯದರ್ಶಿ ಬಿ.ಮಂಜುಳಾ, ಸಂಘಟನಾ ಕಾರ್ಯದರ್ಶಿ ಸವಿತಾ, ಸದಸ್ಯರಾದ ಜ್ಯೋತಮ್ಮ, ಲಕ್ಷ್ಮಮ್ಮ, ಸೌಮ್ಯಾ, ಸುಮಾ, ಭಾಗ್ಯಮ್ಮ, ಸುಂದರಮ್ಮ, ನಾಗರತ್ನಾ, ಸನ್ನಿಧಿ, ವಸಂತಾ, ಇಂಚರಾ, ಮಾನ್ವಿತ ಇದ್ದರು.