ಮೈಸೂರಿನ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ
- ಬೀದರ್‌ನ ಡಾ.ಸಿದ್ಧರಾಮ ಶರಣ ಬೆಲ್ದಾಳ ಅವರಿಗೆ ‘ಬಸವ ರಾಷ್ಟ್ರೀಯ ಪುರಸ್ಕಾರ’ ಪ್ರದಾನ
- ಜನರ ಭಾಷೆಯಾದ ಕನ್ನಡವನ್ನು ದೈವಭಾಷೆಯಾಗಿಸಿದ ನಾಯಕ ಬಸವಣ್ಣ.
- ಗ್ಯಾರಂಟಿಗಳ ಅನುಷ್ಠಾನವು ಬಸವ ತತ್ವದ ಕನಸು
ಮೈಸೂರು: ಬೀದರ್‌ನ ಡಾ.ಸಿದ್ಧರಾಮ ಶರಣ ಬೆಲ್ದಾಳ ಅವರಿಗೆ ‘ಬಸವ ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮೈಸೂರು ಮಹಾನಗರ ಪಾಲಿಕೆ, ಬಸವ ಬಳಗಗಳ ಒಕ್ಕೂಟದ ಸಹಯೋಗದಲ್ಲಿ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಳಿಕ ಮಾತನಾಡಿದ ಡಾ.ಸಿದ್ಧರಾಮ ಶರಣ ಬೆಲ್ದಾಳ ಅವರು, ರಾಜ್ಯ ಸರ್ಕಾರದಿಂದ ಬಸವ ಪರ ಕಾರ್ಯಗಳು ಆಗಿವೆ. ಸಾಂಸ್ಕೃತಿಕ ನಾಯಕ ಘೋಷಣೆ, ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಅಳವಡಿಕೆ, ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ, ಗ್ಯಾರಂಟಿಗಳ ಅನುಷ್ಠಾನವು ಬಸವ ತತ್ವದ ಕನಸುಗಳಾಗಿವೆ ಎಂದರು.
ಮಾನವತೆ ಒಂದಾಗಬೇಕು. ಹಿಂದೂ ಒಂದು ಎಂಬುದು ಬೋಗಸ್. ಸರ್ವ ಸಮಾಜ ನಿರ್ಮಾಣದಿಂದ ಮಾತ್ರವೇ ಭಾರತವು ಒಂದಾಗುತ್ತದೆ. ಬಸವಣ್ಣನವರ ಅನುಯಾಯಿ ಎನ್ನುವುದಕ್ಕೆ ಎದೆಗಾರಿಕೆ ಬೇಕು. ಅದನ್ನು ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ ಹೇಳಿಕೊಳ್ಳುತ್ತಾರೆ. ಜನರ ಭಾಷೆಯಾದ ಕನ್ನಡವನ್ನು ದೈವಭಾಷೆಯಾಗಿಸಿದ ನಾಯಕ ಬಸವಣ್ಣ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ನಾಡಿನ ಧ್ರುವತಾರೆಗಳು ಎಂದರು.