ಕೊಳ್ಳೇಗಾಲದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ಭಾನುವಾರ ನಡೆದ ದೇವಾಂಗ ಸಮಾಜದ ಮಹಾಸಭೆಯಲ್ಲಿ ದೇವಾಂಗ ಸಮಾಜದ ಯಜಮಾನ ನಾಗರಾಜಯ್ಯ ಅಚ್ಗಾಳ್ ಮಾತನಾಡಿದರು. ಡಿ.ಜೆ.ಸುರೇಶ್, ಸುಬ್ರಹ್ಮಣ್ಯ, ಮಾಸ್ಟರ್ ವೀರಭದ್ರಯ್ಯ, ಮುರಳಿ, ನಾರಾಯಣಸ್ವಾಮಿ ಇತರರಿದ್ದರು. 
ಮೈಸೂರು

ತಾಲೂಕು ಆಡಳಿತ ದೇಗುಲ ಸುಪರ್ದಿಗೆ ಪಡೆದಿರುವುದು ಸರಿಯಲ್ಲ

ಕೊಳ್ಳೇಗಾಲ: ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯ ದೇವಾಂಗ ಸಮಾಜದ ಆಸ್ತಿಯಾಗಿದೆ. ತಾಲೂಕು ಆಡಳಿತ ದೇಗುಲ ಸುಪರ್ದಿಗೆ ಪಡೆಯಲು ತೆಗೆದುಕೊಂಡಿರುವ ಕ್ರಮ ಸರಿಯಲ್ಲ. ಈ ಕುರಿತು ಈಗಾಗಲೇ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿದೆ ಎಂದು ದೇವಾಂಗ ಸಮಾಜದ ಯಜಮಾನ ಅಚ್ಗಾಳ್ ನಾಗರಾಜಯ್ಯ ಹೇಳಿದರು.
ಪಟ್ಟಣದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ಭಾನುವಾರ ನಡೆದ ದೇವಾಂಗ ಸಮಾಜದ ಮಹಾಸಭೆ ಉದ್ದೇಶಿಸಿ ಮಾತನಾಡಿ, ರಾಜ್ಯಾದ್ಯಂತ ಸಿ ವರ್ಗದ ವ್ಯಾಪ್ತಿಗೆ ಸಾವಿರಾರು ದೇವಾಲಯಗಳು ಸೇರಿದೆ. ಆದರೆ, ತಾಲೂಕು ಆಡಳಿತ ನೋಟಿಸ್ ನೀಡಿ ನಮ್ಮ ದೇವಾಂಗ ಸಮಾಜದ ಸುಪರ್ದಿಯಲ್ಲಿರುವ ದೇವಾಲಯವನ್ನು ಸರ್ಕಾರಕ್ಕೆ ಪಡೆಯಲು ಮುಂದಾಗಿರುವುದು ಸರಿಯಲ್ಲ. ಈ ಕುರಿತು ನ್ಯಾಯಾಲಯಲ್ಲಿ ತಡೆಯಾಜ್ಞೆ ತರಲಾಗಿದೆ. ನಮ್ಮ ಚೌಡೇಶ್ವರಿ ದೇವಾಲಯವನ್ನು ಯಾವುದೇ ಕಾರಣಕ್ಕೂ ಕೊಡುವುದಿಲ್ಲ. ಹಾಗಾಗಿ ಸಮಾಜದ ಎಲ್ಲರೂ ನಮ್ಮ ಕಾನೂನು ಹೋರಾಟಕ್ಕೆ ಸಹಕಾರ ನೀಡಬೇಕು ಎಂದರು.
ಈ ವೇಳೆ ಸಮಾಜನ ಯಜಮಾನರು, ಮುಖಂಡರ ಸಮ್ಮು ಖದಲ್ಲಿ ಆರ್.ವೀರಪ್ಪ, ಧನಪಾಲ್ ಅವರನ್ನು ನೂತನ ಶೆಟ್ಟಿಗಾರರಾಗಿ ತೀರ್ಮಾನಿಸಿ ಘೋಷಿಸಲಾಯಿತು.
ಡಿ.ಜೆ ಸುರೇಶ್, ಸುಬ್ರಹ್ಮಣ್ಯ, ವೀರಭದ್ರಯ್ಯ, ಮಾಸ್ಟರ್ ವೀರಭದ್ರಯ್ಯ, ಮುರಳಿ, ನಾರಾಯಣ ಸ್ವಾಮಿ, ಕುಮಾರ್, ರಮೇಶ್, ಚಾಮರಾಜನಗರ ವಿದ್ಯಾಕುಮಾರ್, ಎ.ಪಿ.ಶಂಕರ್, ರಾಜು, ನಾರಾಯಣ್, ಮನೋಹರ್ ಮತ್ತಿತರಿದ್ದರು.