ಬನ್ನೂರಿನ ಸಮೀಪದ ಹುನುಗನಹಳ್ಳಿ ಗ್ರಾಮದಲ್ಲಿ ಹಳ್ಳಿಕಾರ್ ತಳಿಯ ರಾಸುಗಳ ಮಾಲೀಕರನ್ನು ರೈತ ಮುಖಂಡ ವಿಶ್ವನಾಥ್ ಸನ್ಮಾನಿಸಿ ಅಭಿನಂದಿಸಿದರು. ಬನ್ನೂರು ನಾರಾಯಣ್, ಮಾದೇಗೌಡ, ಎಸ್.ಚನ್ನೇಗೌಡ, ಹಟ್ಟಿಗೌಡ, ದೇವರಾಜು ಮೊದಲಾದವರು ಇದ್ದರು 
ಮೈಸೂರು

ಹಳ್ಳಿಕಾರ್ ದೇಸಿ ತಳಿ ಉಳಿಸುವುದು ಎಲ್ಲರ ಕರ್ತವ್ಯ

ಪ್ರಮುಖ ಮುಖ್ಯಾಂಶಗಳು

  • ಹುನುಗನಹಳ್ಳಿ ಗ್ರಾಮದ ರೈತ ಮುಖಂಡ ವಿಶ್ವನಾಥ್ ಅಭಿಮತ
ಬನ್ನೂರು: ದೇಸಿ ತಳಿಯಾದ ಹಳ್ಳಿಕಾರ್ ತಳಿಯ ರಾಸುಗಳನ್ನು ರಕ್ಷಣೆ ಮಾಡಿ ಉಳಿಸಿ ಬೆಳೆಸುವ ಅಗತ್ಯತೆ ಇದೆ ಎಂದು  ಹುನುಗನಹಳ್ಳಿ ಗ್ರಾಮದ ರೈತ ಮುಖಂಡ ವಿಶ್ವನಾಥ್ ತಿಳಿಸಿದರು.
ಪಟ್ಟಣದ ಸಮೀಪದ ಹುನುಗನಹಳ್ಳಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಳ್ಳಿಕಾರ್ ರಾಸುಗಳ ಮೆರವಣಿಗೆ ಅಂಗವಾಗಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಳ್ಳಿಕಾರ್ ತಳಿಯ ರಾಸುಗಳ ಮಾಲೀಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಳ್ಳಿಕಾರ್ ತಳಿಯ ರಾಸುಗಳು ಬಹಳಷ್ಟು ವೈಶಿಷ್ಟ್ಯವನ್ನು ಹೊಂದಿದೆ. ಈ ಹಸುಗಳು ಮಾನವನೊಂದಿಗೆ ಬಹಳ ಬೇಗ ಹೊಂದಿಕೊಳ್ಳುವ ಗುಣ ಹೊಂದಿದೆ ಎಂದರು. 
ಹಳ್ಳಿಕಾರ್ ತಳಿಯ ರಾಸುಗಳ ಮಾಲೀಕರಾದ ಕುಶಾಲ್, ಶ್ರೀನಿವಾಸ್, ತಮ್ಮಯ್ಯ, ಶಿವಣ್ಣ, ಜಯರಾಮ ಅವರನ್ನು ಸನ್ಮಾನಿಸಲಾಯಿತು. ನಂತರ ಮಾರಮ್ಮ ದೇವಾಲಯದ ಆವರಣದಲ್ಲಿ ರಾಸುಗಳಿಗೆ ಪೂಜೆ ಸಲ್ಲಿಸಿ ಊರಿನ ಬೀದಿಗಳಲ್ಲಿ ಡೋಲು ನಗಾರಿಯೊಂದಿಗೆ ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್, ರೈತ ನಾಯಕಿ ಭಾಗ್ಯಲಕ್ಷ್ಮೀ, ಬೆಟ್ಟಹಳ್ಳಿ ಶಿವರಾಂ, ಊರಿನ ಮುಖಂಡರಾದ ಮಾದೇಗೌಡ, ರಾಮಕೃಷ್ಣ, ನಾರಾಯಣ, ಮಾದೇಗೌಡ, ಎಸ್. ಚನ್ನೇಗೌಡ, ಹಟ್ಟಿಗೌಡ, ದೇವರಾಜು, ಕೃಷ್ಣ, ರಾಜು, ವೀರಭದ್ರೇಗೌಡ, ನಂಜುಂಡೇಗೌಡ, ಮಾರಿಗುಡ್ಡಪ್ಪ ಸೇರಿದಂತೆ ಗ್ರಾಮದ ಗ್ರಾಮಸ್ಥರು, ಮುಖಂಡರು ಇದ್ದರು.