ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದಿಂದ ಸೋಮವಾರ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಮೈಸೂರು: ನಗರದ ವಿದ್ಯಾರಣ್ಯಪುರಂನಲ್ಲಿನ ಬಂಧನ್ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ 30-40 ಕನ್ನಡಿಗರನ್ನು ಏಕಾಏಕಿ ಕೆಲಸದಿಂದ ವಜಾ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಬಳಗದ ವತಿಯಿಂದ ಸೋಮವಾರ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಬಂಧನ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕನ್ನಡಿಗರನ್ನು ಯಾವುದೇ ಪೂರ್ವ ಮಾಹಿತಿ ನೀಡದೆ, ಕಾರಣ ಕೇಳಿ ನೋಟಿಸ್ ನೀಡದೆ ಕೆಲಸದಿಂದ ವಜಾ ಮಾಡಿ, ಬೇರೆ ರಾಜ್ಯದ ನೌಕರರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ವಜಾಗೊಳಿಸಿ ಮೂರು ತಿಂಗಳಾದರೂ ಬಿಡುಗಡೆ ಪತ್ರ ನೀಡಿಲ್ಲ. ವಜಾಗೊಂಡ ನೌಕರರು ಬಿಡುಗಡೆ ಪತ್ರ ಕೇಳಲು ಹೋದಾಗ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಅಸಭ್ಯವಾಗಿ ವರ್ತಿಸಿದ್ದಾರೆ. ಬಿಡುಗಡೆ ಪತ್ರ ಇಲ್ಲದೆ ವಜಾಗೊಂಡ ನೌಕರರು ಬೇರೆ ಕಡೆ ಕೆಲಸ ಮಾಡಲು ಆಗುತ್ತಿಲ್ಲ. ಹೀಗಾಗಿ ಬ್ಯಾಂಕ್ ಕ್ಷಮಾಪಣೆ ಕೇಳಬೇಕು. ವಜಾಗೊಂಡ ನೌಕರರಿಗೆ ಕೂಡಲೇ ಬಿಡುಗಡೆ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಅಧಕ್ಷ ಎಂ.ಲಿಂಗರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಚರಣ್ ರಾಜ್, ಉಪಧ್ಯಾಕ್ಷ ಮಲ್ಲೇಶ್, ಆನಂದ್‌ಕುಮಾರ್ ಗೌಡ, ಖಜಾಂಚಿ, ಮಹದೇವಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ, ನೇತ್ರಾವತಿ, ವಿನೋದ್, ಕರಿಯಪ್ಪ, ಪ್ರಕಾಶ್, ರವಿಕಿರಣ್, ಮಹದೇವು, ಉಷಾ, ಮಂಜುಳಾ ಇತರರು ಇದ್ದರು.