ಹುಣಸೂರು ತಾಲೂಕು ವೀರನಹೊಸಳ್ಳಿ ಹಾಡಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯರಿಗೆ ಆದಿವಾಸಿ ಹಕ್ಕುಗಳ ಸಮಿತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು. ಡಿಸಿ ಲಕ್ಷ್ಮೀಕಾಂತ ರೆಡ್ಡಿ, ಕಲ್ಕುಣಿಕೆ ಬಸವರಾಜು, ಜೆ.ಕೆ.ತಿಮ್ಮ, ಹರೀಶ್, ಬಿ.ಕೆ.ಹರೀಶ್, ಜಗದೀಶ್ ಸೂರ್ಯ ಇತರರಿದ್ದರು. 
ಮೈಸೂರು

ಆದಿವಾಸಿಗಳ ವಿವಿಧ ಬೇಡಿಕೆಗಳಿಗೆ ಒತ್ತಾಯ

ಹುಣಸೂರು:

ಆದಿವಾಸಿಗಳಿಗೆ ಜೀವನೋಪಾಯಕ್ಕಾಗಿ ಭೂಮಿ, ವಸತಿ, ಪೌಷ್ಟಿಕ ಆಹಾರ ವಿತರಣೆ, ಆಶ್ರಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿ ಡಾ.ಯತೀಂದ್ರ ಸಿದ್ದರಾಮಯ್ಯ, ಆದಿವಾಸಿಗಳ ಸಮಸ್ಯೆ ಬಗ್ಗೆ ಅರಿವಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕೂಡಲೇ ಸಭೆ ಕರೆಯಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಸಮಿತಿಯ ಕಾರ್ಯದರ್ಶಿ ಸಂಜಯ್, ಖಜಾಂಚಿ ಬಸಪ್ಪ, ವಿ.ಬಸವರಾಜು ಕಲ್ಕುಣಿಕೆ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ತಾಲೂಕು ಕಾರ್ಯದರ್ಶಿ ಎಚ್.ಡಿ.ಬೀರೇಶ್ವರ್, ಬಿ.ಕೆ.ಹರೀಶ್, ಸೋಮ, ಸುನಿಲ್, ಅನಿಲ್, ಮಾಸ್ತಿಗುಡಿ ಅಯ್ಯಪ್ಪ, ಅಶೋಕ, ವಸಂತ, ಸಾವಿತ್ರಿ, ಮುತ್ತಪ್ಪ, ಅಣ್ಣಯ್ಯ, ಸುರೇಶ್, ರಮೇಶ್, ಗೌರಿ, ಕರಿಯಣ್ಣ, ಕೃಷ್ಣ ಇದ್ದರು.