‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಭಾರತೀಯ ದಸ್ತಕಾರ್ ಕೈಮಗ್ಗ ಮತ್ತು ಕರಕುಶಲ ಪ್ರದರ್ಶನ. 
ಮೈಸೂರು

ಭಾರತೀಯ ದಸ್ತಕಾರ್ ಕೈಮಗ್ಗ ಮತ್ತು ಕರಕುಶಲ ಪ್ರದರ್ಶನ

ಮೈಸೂರು: ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಭಾರತೀಯ ದಸ್ತಕಾರ್ ಕೈಮಗ್ಗ ಮತ್ತು ಕರಕುಶಲ ಪ್ರದರ್ಶನ ಗಮನ ಸೆಳೆಯುತ್ತಿದೆ.
ಮಾ.15ರವರೆಗೆ ಕೈಮಗ್ಗ, ಕರಕುಶಲ ಮತ್ತು ಜೀವನಶೈಲಿ ಉತ್ಪನ್ನಗಳ ವಿಶೇಷ ಪ್ರದರ್ಶನಗೊಳ್ಳಲಿವೆ. ದೇಶಾದ್ಯಂತ 160ಕ್ಕೂ ಹೆಚ್ಚು ಕುಶಲಕರ್ಮಿ ತಮ್ಮ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡುತ್ತಿದ್ದಾರೆ. ಸಾರ್ವಜನಿಕರು ಬೆಳಗ್ಗೆ 10.30 ರಿಂದ ರಾತ್ರಿ 9.30 ರವರೆಗೆ ಮೇಳದಲ್ಲಿ ಭಾಗಿಯಾಗಬಹುದಾಗಿದೆ.
ಮುರಾದಾಬಾದ್‌ನಿಂದ ಹಿತ್ತಾಳೆ ಕಲಾಕೃತಿಗಳು ಮತ್ತು ಲೋಹದ ಮನೆ ಅಲಂಕಾರ, ಒಡಿಶಾದ ಪಟ್ಟಚಿತ್ರ, ಆಗ್ರಾದ ಅಮೃತಶಿಲೆ ಕರಕುಶಲ ವಸ್ತುಗಳು, ಬಿಹಾರದ ಭಾಗಲ್‌ಪುರಿ ಸೀರೆಗಳು, ಪಶ್ಚಿಮ ಬಂಗಾಳದ ಕೋಲ್ಕತ್ತಾ ಸೀರೆಗಳು, ಮೀರತ್‌ನ ಖಾದಿ ಕುರ್ತಾ ಮತ್ತು ಖಾದಿ ಕುರ್ತಿ, ಖುರ್ಜಾದಿಂದ ಪಾತ್ರೆಗಳು, ಕಾಶ್ಮೀರದ ಪಾಶ್ಮಿನಾ ಶಾಲುಗಳು, ಸೀರೆ, ಉಡುಪುಗಳು, ಕರ್ನಾಟಕದ ಧಾರವಾಡ ಮತ್ತು ಇಳಕಲ್ ಸೀರೆಗಳು, ಬನಾರಸ್‌ನಿಂದ ಬನಾರಸಿ ರೇಷ್ಮೆ ಸೀರೆ, ರಾಜಸ್ಥಾನದಿಂದ ಪಿಕಲ್‌ಗಳು, ತಮಿಳುನಾಡಿನಿಂದ ಕೈಮಗ್ಗ ಮನೆ ಪೀಠೋಪಕರಣಗಳು, ಝಾನ್ಸಿಯಿಂದ ಕೈಮಗ್ಗ ಬೆಡ್‌ಶೀಟ್‌ಗಳು, ಜೈಪುರ ರಾಜಸ್ಥಾನದಿಂದ ಬೆಡ್‌ಶೀಟ್‌ಗಳು, ಆಂಧ್ರಪ್ರದೇಶದ ಲಕ್ನೋದಿಂದ ಚಿಕ್ಕಂಕರಿ ಉಡುಗೆ ಮತ್ತು ಟಾಪ್‌ಗಳು, ಪಶ್ಚಿಮ ಬಂಗಾಳದ ಆಭರಣಗಳು, ಕೈಯಿಂದ ತಯಾರಿಸಿದ ಫಿರೋಜಾಬಾದ್ ಗಾಜಿನ ಬಳೆಗಳು, ಪಂಜಾಬ್‌ನ ಜ್ಯೋತಿ, ಮಿರ್ಜಾಪುರದ ರತ್ನಗಂಬಳಿಗಳು, ನೇಪಾಳದ ನೇಪಾಳಿ ಕಲ್ಲಿನ ಕಲಾಕೃತಿಗಳು ಇಲ್ಲಿ ಲಭ್ಯ ಇದೆ.