ಹುಣಸೂರು ತಾಲೂಕು ಮುಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಹೈಟೆಕ್ ಪ್ರಯೋಗಾಲಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ ಉದ್ಘಾಟಿಸಿದರು. ಸತ್ಯ, ರಾಜಣ್ಣ, ಸಂದೀಪ್, ವಸಂತಕುಮಾರ್ ರಮೇಶ್ ಇತರರಿದ್ದರು. 
ಮೈಸೂರು

ಭಾರತ ಪ್ರತಿಭಾವಂತ ವಿಜ್ಞಾನಿಗಳ ದೇಶ

ಪ್ರಮುಖ ಮುಖ್ಯಾಂಶಗಳು

  • talented scientists
ಹುಣಸೂರು: ಭಾರತ ಪ್ರತಿಭಾವಂತ ವಿಜ್ಞಾನಿಗಳ ದೇಶವಾಗಿದ್ದು, ಶಾಲಾ ಹಂತದಲ್ಲಿ ಪ್ರಯೋಗಾಲಯಗಳ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಮನೋಭಾವಗಳನ್ನು ಬೆಳೆಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ ಅಭಿಪ್ರಾಯಪಟ್ಟರು.
ತಾಲೂಕಿನ ಮುಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಕಿವಾನಿ ಲ್ಯಾಬ್ ಇಂಡಿಯಾ ಪ್ರೈಲಿ. ಸಹಯೋಗದಲ್ಲಿ 6 ಲಕ್ಷ ರೂ.ಗಳ ವೆಚ್ಚದಡಿ ನಿರ್ಮಾಣವಾದ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗೆ ಹೈಟೆಕ್ ವಿಜ್ಞಾನ ಪ್ರಯೋಗಾಲಯ, ಪ್ರೊಜೆಕ್ಟರ್ ಮತ್ತು 50 ಸಾವಿರಕ್ಕೂ ಹೆಚ್ಚು ಮೌಲ್ಯದ ಕ್ರೀಡಾ ಸಾಮಾಗ್ರಿಗಳನ್ನು ದಾನಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿರುವುದು ಸರ್ಕಾರಿ ಶಾಲೆಗಳ ಮೇಲಿನ ಪ್ರೀತಿಯನ್ನು ತೋರುತ್ತದೆ. ಸಮುದಾಯದ ಸಹಕಾರವಿಲ್ಲದೇ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ಶಾಲೆಯ ಹಳೆಯ ವಿದ್ಯಾರ್ಥಿಗಳ ನಡೆ ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಿವಾನಿ ಲ್ಯಾಬ್ ಇಂಡಿಯಾ ವೇ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಎಚ್.ಆರ್.ಡಿ.ಸತ್ಯ, ವ್ಯವಸ್ಥಾಪಕ ರಾಜಣ್ಣ, ಹಳೆಯ ವಿದ್ಯಾರ್ಥಿ ಮಾಚಬಾಯನಹಳ್ಳಿ ಸಂದೀಪ್, ದೈಹಿಕ ಪರಿವೀಕ್ಷಕ ರಮೇಶ, ಮುಳ್ಳೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ, ಎಸ್‌ಡಿಎಂಸಿ ಅಧ್ಯಕ್ಷ ನಟರಾಜು ಮತ್ತು ಪದಾಧಿಕಾರಿಗಳು, ಶಾಲೆ ಮುಖ್ಯ ಶಿಕ್ಷಕರಾದ ಮೋಹನಕುಮಾರ ಮತ್ತು ಶಿಕ್ಷಕ ವೃಂದ, ಸ್ಥಳೀಯ ಜನಪ್ರತಿನಿಧಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು,ಪೋಷಕರು, ಸಾರ್ವಜನಿಕರು,ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.