ಮೈಸೂರು ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಮೂತ್ರಪಿಂಡ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಜಾವಗಲ್ ಶ್ರೀನಾಥ್ ಉದ್ಘಾಟಿಸಿದರು. ಡಾ.ಎಚ್.ಬಸವನಗೌಡಪ್ಪ, ಡಾ.ಬಿ.ಮಂಜುನಾಥ ಹಾಗೂ ಇತರರು ಇದ್ದರು. 
ಮೈಸೂರು

ಹೆಚ್ಚುತ್ತಿರುವ ಕಿಡ್ನಿ ಸಮಸ್ಯೆ : ಜಾವಗಲ್ ಶ್ರೀನಾಥ್ ಕಳವಳ

ಸದೇಶ್ ಕಾರ್ಮಾಡ್
ಮೈಸೂರು: ಹಲವಾರು ಜನರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಹಲವು ಜನರಿಗೆ ಇದರ ಅರಿವು ಸಹ ಇಲ್ಲ ಎಂದು ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಜಾವಗಲ್ ಶ್ರೀನಾಥ್ ಹೇಳಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಮೂತ್ರಪಿಂಡ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಕಷ್ಟು ಜನರು ಕಿಡ್ನಿ ವೈಫಲ್ಯಕ್ಕೆ ಗುರಿಯಾಗುತ್ತಿದ್ದಾರೆ. ನನ್ನ ತಾಯಿ ಕೂಡ ಕಳೆದ ಏಳು ವರ್ಷ ಕಾಲ ಕಿಡ್ನಿ ಸಮಸ್ಯೆ ಎದುರಿಸಿದವರು. ವೈದ್ಯರ ಆರೈಕೆಯಿಂದ ಅವರು ಇನ್ನಷ್ಟು ಕಾಲ ಬದುಕಲು ಸಾಧ್ಯವಾಯಿತು. ರೋಗಿಗಳ ನಾಡಿ ಮಿಡಿತ ಅರಿತು ಅವರಿಗೆ ವೈದ್ಯಕೀಯ ಜ್ಞಾನ ನೀಡಿದರೆ ಅವರು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂದರು.ಎಂದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಎಚ್.ಬಸವನಗೌಡಪ್ಪ ಮಾತನಾಡಿ, ಕಿಡ್ನಿ ಬಹಳ ಪ್ರಮುಖ ಅಂಗ. ಸದಾ ಪೇನ್ ಕಿಲ್ಲರ್ ಮಾತ್ರೆ ಸೇವನೆಯಿಂದ ಕಿಡ್ನಿ ಆರೋಗ್ಯ ಹಾಳು ಮಾಡುತ್ತಿವೆ. ವೈದ್ಯರ ಸಲಹೆ ಇಲ್ಲದೆ ಯಾವುದೇ ಮಾತ್ರೆ ಪಡೆಯಬಾರದು. ಹಾಗೆಯೇ ವೈದ್ಯರ ಸಲಹೆ ಇಲ್ಲದೆ ಸಪ್ಲಿಮೆಂಟ್ ಪಡೆಯಬಾರದು ಎಂದರು.
ಕಿಡ್ನಿ ಕಾಯಿಲೆ ತುಂಬಾ ಸೈಲೆಂಟ್. ಬೇಗನೆ ಬೆಳಕಿಗೆ ಬರುವುದಿಲ್ಲ. ಹೀಗಾಗಿ ಆಗಾಗ್ಗೆ ಪರೀಕ್ಷೆಗೆ ಒಳಗಾಗಬೇಕು. ಮಧುಮೇಹಿಗಳು ಬಹಳ ಎಚ್ಚರ ವಹಿಸುವುದು ಅಗತ್ಯ. ಕಿಡ್ನಿ ಚಿಕಿತ್ಸೆ ಸುಲಭವಾಗಿ ಸಿಗುವಂತೆ ಆಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಡಾ.ಬಿ.ಮಂಜುನಾಥ ಇದ್ದರು.