ಸೆಸ್ಕ್)ದ ಪ್ರಧಾನ ಕಚೇರಿಯಲ್ಲಿ ನಿರ್ಮಿಸಿರುವ ನಾಲ್ಕನೇ ಮಹಡಿ ಕಚೇರಿಯ ಉದ್ಘಾಟನಾ ಕಾರ್ಯಕ್ರಮ  
ಮೈಸೂರು

ಸೆಸ್ಕ್ ಪ್ರಧಾನ ಕಚೇರಿ ನಾಲ್ಕನೇ ಮಹಡಿ ಉದ್ಘಾಟನೆ

ಪ್ರಮುಖ ಮುಖ್ಯಾಂಶಗಳು

  • ಆಡಳಿತಾತ್ಮಕ ಕಾರ್ಯಗಳಿಗೆ ಇನ್ನಷ್ಟು ವೇಗ ಮತ್ತು ಸುಗಮತೆ ದೊರೆಯಲಿದೆ.
  • ಸೆಸ್ಕ್ ಪ್ರಧಾನ ಕಚೇರಿಯಲ್ಲಿ ನಿರ್ಮಿಸಿರುವ ನಾಲ್ಕನೇ ಮಹಡಿ ಕಚೇರಿಯ ಉದ್ಘಾಟನಾ ಕಾರ್ಯಕ್ರಮ
ಮೈಸೂರು: ವಿಜಯನಗರದ 2ನೇ ಹಂತದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ಪ್ರಧಾನ ಕಚೇರಿಯಲ್ಲಿ ನಿರ್ಮಿಸಿರುವ ನಾಲ್ಕನೇ ಮಹಡಿ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.
ಸೆಸ್ಕ್ ಅಧ್ಯಕ್ಷ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ನೂತನ ಕಚೇರಿ ಉದ್ಘಾಟನೆಯಿಂದಾಗಿ ನಿಗಮದ ಆಡಳಿತಾತ್ಮಕ ಕಾರ್ಯಗಳಿಗೆ ಇನ್ನಷ್ಟು ವೇಗ ಮತ್ತು ಸುಗಮತೆ ದೊರೆಯಲಿದೆ. ನಿಗಮದ ಕಾರ್ಯಕ್ಷಮತೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಉತ್ತಮ ವಾತಾವರಣದ ಮೂಲಕ ಕೆಲಸದ ಮಾಡಲು ಈ ಕಟ್ಟಡ ನೆರವಾಗಲಿದೆ ಎಂದು ಹೇಳಿದರು.
ಸೆಸ್ಕ್ ವ್ಯಾಪ್ತಿಯ ವಿವಿಧ ಉಪ ವಿಭಾಗಗಳಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದವರಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಅಶ್ವಿನಿ, ಮಹಾಂತೇಶ್, ಸುಮಂತ್‌ರಾಜ್ ಅರಸ್, ಡಿ.ಮನೋಜ್, ಕೆ.ಕವಿತಾ, ಯುವಶ್ರೀ ಹಾಗೂ ವಿಜಯಕುಮಾರಿ ಅವರು ಸಹಾಯಕರಾಗಿ ನೇಮಕವಾದರೆ, ಕಿರಿಯ ಸಹಾಯಕರಾಗಿ ದೀಕ್ಷಿತ್ ಹಾಗೂ ಸಹಾಯಕ ಪವರ್‌ಮನ್ ಹುದ್ದೆಗೆ ಶ್ರೀಧರ್ ಅವರಿಗೆ ನೇಮಕಾತಿ ಪತ್ರವನ್ನು ವಿತರಿಸಲಾಯಿತು. 
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು, ತಾಂತ್ರಿಕ ನಿರ್ದೇಶಕ ಡಿ.ಜೆ.ದಿವಾಕರ್, ಮುಖ್ಯ ಆರ್ಥಿಕ ಅಧಿಕಾರಿ ಜಿ.ರೇಣುಕಾ, ಪ್ರಧಾನ ವ್ಯವಸ್ಥಾಪಕರಾದ ಲಿಂಗರಾಜಮ್ಮ, ಡಾ.ಬಿ.ಆರ್.ರೂಪಾ, ಆರ್.ರಾಮಸ್ವಾಮಿ, ಮುಖ್ಯ ಇಂಜಿನಿಯರ್ ಎಲ್. ಲೋಕೇಶ್, ಅಧೀಕ್ಷಕ ಇಂಜಿನಿಯರ್‌ರಾದ ಸುನೀಲ್‌ಕುಮಾರ್, ಸೋಮಶೇಖರ್ ಸೇರಿದಂತೆ ನಿಗಮ ಕಾರ್ಯಾಲಯದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮೈಸೂರು ವೃತ್ತದ ಸೆಸ್ಕ್ ಜಾಗೃತ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು. 
 ವಿಜಯನಗರದ ಎರಡನೇ ಹಂತದಲ್ಲಿರುವ ಸೆಸ್ಕ್‌ದ ಪ್ರಧಾನ ಕಚೇರಿಯಲ್ಲಿ ನಿರ್ಮಿಸಿರುವ ನಾಲ್ಕನೇ ಮಹಡಿ ಕಚೇರಿಯನ್ನು ಸೆಸ್ಕ್ ಅಧ್ಯಕ್ಷ, ರಮೇಶ್ ಬಂಡಿಸಿದ್ದೇಗೌಡ ಉದ್ಘಾಟಿಸಿದರು.  ಕೆ.ಎಂ.ಮುನಿಗೋಪಾಲ್ ರಾಜು, ಡಿ.ಜೆ. ದಿವಾಕರ್, ಜಿ.ರೇಣುಕಾ ಇನ್ನಿತರರಿದ್ದರು.