seized 
ಮೈಸೂರು

ಅಕ್ರಮವಾಗಿ ಸಂಗ್ರಹಿಸಿದ್ದ ಗಾಂಜಾ ವಶ

ಅವಿನಾಶ್ ಜೈನಹಳ್ಳಿ
ಅಕ್ರಮವಾಗಿ ಗಾಂಜಾ ಸಂಗ್ರಹಿಸಿದ್ದ ಮನೆ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿರುವ ಅಬಕಾರಿ ಪೊಲೀಸರು, 2 ಕೆಜಿ 388 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಸಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಮಂಜುನಾಥ್ ಹಾಗೂ ನಗರದ ನಿಂಗಯ್ಯನಕೆರೆಯ ಶಕ್ತಿಪ್ರಸಾದ್ ಬಂಧಿತರು. ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀಸರು ಮೈಸೂರಿನ ನಿಂಗಯ್ಯಕೆರೆ ರಸ್ತೆಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದರು. ಬಂಧಿತರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ದಾಳಿಯಲ್ಲಿ ಅಬಕಾರಿ ಎಸ್‌ಐ ಪಿ.ರಾಘವೇಂದ್ರ, ಸಿಬ್ಬಂದಿ ಗಣೇಶ್ ಕೆ.ಪಿ., ಪ್ರತಾಪ್ ಸಿ., ರಾಜೀವ ಡಿ., ಉಮೇಶ್ ಸೂರಿ, ವಾಹನ ಚಾಲಕರಾದ ಮಂಜುನಾಥ ಕೆ., ರಾಜಸ್ವ ನಿರೀಕ್ಷಕ ಮಧು, ಶರತ್ ಇದ್ದರು.