ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಹರೀಶ್‌ಗೌಡ ಚಾಲನೆ ನೀಡಿದರು. ರವಿ ಮಂಚೇಗೌಡನ ಕೊಪ್ಪಲು, ಡಿ.ನಾಗಭೂಷಣ್, ಶಿವಮಾದು, ನಿಶಾಂತ್ ಪಟೇಲ್ ಇತರರು ಇದ್ದರು. 
ಮೈಸೂರು

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ: ಕೆ.ಹರೀಶ್‌ಗೌಡ

ಪ್ರಮುಖ ಮುಖ್ಯಾಂಶಗಳು

  • ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಹೇಳಿಕೆ
  • ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ
ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಭಾನುವಾರ ಕ್ಷೇತ್ರದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ರಸ್ತೆಗಳ ಅಭಿವೃದ್ಧಿ ಹಾಗೂ ಯುಜಿಡಿ ನಿರ್ಮಾಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ದುಡಿಯುತ್ತಿರುವ ಶಾಸಕರು, ವಾರ್ಡ್ ನಂ.3 ವ್ಯಾಪ್ತಿಯಲ್ಲಿ 6 ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಸೂರ್ಯ ಬೇಕರಿ ಮುಖ್ಯ ರಸ್ತೆಯ 18ನೇ ಅಡ್ಡ ರಸ್ತೆ, ಮಹದೇಶ್ವರ ಬಡಾವಣೆ ಹಾಗೂ ಕಿಡಿಗಣ್ಣಮ್ಮ ಬಡಾವಣೆಯ ಅಡ್ಡರಸ್ತೆಗಳ ರಸ್ತೆ ಮತ್ತು ಮಳೆ ನೀರು ಚರಂಡಿ ಅಭಿವೃದ್ಧಿ, ರಾಘವೇಂದ್ರ ಸ್ವಾಮಿ ಮಠದ ಮುಖ್ಯ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ, ಮಹದೇಶ್ವರ ಚಿತ್ರಮಂದಿರದ ಅಕ್ಕಪಕ್ಕದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ವಿಜಯನಗರ ರೈಲ್ವೆ ಬಡಾವಣೆಯ ಅಡ್ಡ ರಸ್ತೆಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ವಿಜಯನಗರ ರೈಲ್ವೆ ಪಾರ್ಕ್ ಗ್ರಿಲ್ ಮತ್ತು ಪೇಂಟಿಂಗ್ ಮಾಡುವ ಕಾಮಗಾರಿ, ಸುಭಾಷ್ ನಗರದ ಲಕ್ಷ್ಮೀದೇವಿ ದೇವಸ್ಥಾನದ ಮುಂಭಾಗ ಚರಂಡಿ ಕವರಿಂಗ್ ಸ್ಲ್ಯಾಬ್ ಮತ್ತು ಡೆಕ್ ಸ್ಲ್ಯಾಬ್ ನಿರ್ಮಾಣ, ಕಾಳಿಕಾಂಬ ದೇವಸ್ಥಾನದ ಹಿಂಭಾಗದ ಗಲ್ಲಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮತ್ತು ಸುಭಾಷ್ ನಗರದ ಕ್ರಾಸ್ ರಸ್ತೆಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ಯು.ಜಿ.ಡಿ. ಕಾಮಗಾರಿ - ರೈಲ್ವೆ ಬಡಾವಣೆ, ಸುಭಾಷ್ ನಗರ ಮತ್ತು ಮಹದೇಶ್ವರ ಬಡಾವಣೆ ಆಯ್ದ ಅಡ್ಡ ರಸ್ತೆ ಅಭಿವೃದ್ಧಿ, ಕೆ.ಪಿ. ಕಾನ್ವೆಂಟ್ ರಸ್ತೆ, ಕಿಡಗಣ್ಣಮ್ಮ ಬಡಾವಣೆ ಸೋಮನಾಳಮ್ಮ ದೇವಸ್ಥಾನ ಹತ್ತಿರ ಒಳಚರಂಡಿ ಕೊಳವೆಮಾರ್ಗ ಅಳವಡಿಸಿ ಯಂತ್ರಗುಂಡಿಗಳನ್ನು ನಿರ್ಮಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಚಾಮರಾಜ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಅಂತೆಯೇ ಕ್ಷೇತ್ರದ ಎಲ್ಲ ಭಾಗಗಳ ರಸ್ತೆ, ಯುಜಿಡಿ ಸೇರಿದಂತೆ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ನಾನಾ ಕಾಮಗಾರಿಗಳು ನಡೆಯುತ್ತಿವೆ ಎಂದರು.
ಇಂದಿರಾ ಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ದೇವರಾಜ ಬ್ಲಾಕ್ ಅಧ್ಯಕ್ಷ ಡಿ.ನಾಗಭೂಷಣ್, ನಗರ ಪಾಲಿಕೆ ಮಾಜಿ ಸದಸ್ಯ ಶಿವಮಾದು, ಕೆಪಿಸಿಸಿ ಸದಸ್ಯೆ ರತ್ನಮ್ಮ, ಚಾಮರಾಜ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಪಟೇಲ್, ಮುಖಂಡರಾದ ಸುರೇಶ್, ಮಾಯಮ್ಮ, ರೇಖಾಮ್ಮ, ಮರಿದೊಳ್ಳಯ್ಯ , ವೆಂಕಟೇಶ್, ಅರುಣ್,ಮಂಜು, ರಾಘು, ನಾಗಣ್ಣ, ನಾಗೇಶ್ ಇದ್ದರು.