housewife's suicide 
ಮೈಸೂರು

ಗೃಹಿಣಿ ಆತ್ಮಹತ್ಯೆ ಪ್ರಕರಣದಲ್ಲಿ ಪತಿ, ಅತ್ತೆಗೆ ಶಿಕ್ಷೆ

ಗೃಹಿಣಿಯ ಸಾವಿಗೆ ಕಾರಣರಾದ ಆಕೆಯ ಪತಿ ಮತ್ತು ಅತ್ತೆಗೆ ಮೈಸೂರಿನ ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಪಿರಿಯಾಪಟ್ಟಣದ ಚಪ್ಪರದಹಳ್ಳಿಯ ಸಿ.ಎನ್.ರೂಪಾ ಅವರ ಸಾವಿಗೆ ಪ್ರಕರಣದಲ್ಲಿ ಕೆ.ಆರ್.ನಗರ ತಾಲೂಕಿನ ಬೆಣಗನಹಳ್ಳಿ ಗ್ರಾಮದ ರಂಗನಾಥ ಮತ್ತು ಅತ್ತೆ ಗೌರಮ್ಮ ಶಿಕ್ಷೆಗೆ ಗುರಿಯಾಗಿದ್ದಾರೆ.
ರಂಗನಾಥನನ್ನು ರೂಪಾ ಅವರು 2000ನೇ ಇಸವಿಯಲ್ಲಿ ವಿವಾಹವಾಗಿದ್ದು, ಪತಿ ಮತ್ತು ಅವರ ಮನೆಯವರ ವರದಕ್ಷಿಣೆ ಕಿರುಕುಳದಿಂದ ರೋಸಿದ್ದರು. ನಿತ್ಯ ಪತಿ ಮತ್ತು ಅತ್ತೆಯ ಕಿರುಕುಳದಿಂದ ಬೇಸತ್ತು 2025ರ ಮಾ.16ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ನಗರದ ಠಾಣೆ ಪೊಲೀಸರು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಂಗನಾಥನಿಗೆ ಐದು ವರ್ಷ ಶಿಕ್ಷೆ ಮತ್ತು ಗೌರಮ್ಮಗೆ 3 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಕೆ.ಎನ್.ರೂಪಾ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ಎ.ಎನ್.ಮಧು ವಾದ ಮಂಡಿಸಿದ್ದರು.