ಹನಗೋಡು ಹೋಬಳಿಯ ಕಾಮಗೌಡನಹಳ್ಳಿಯ ಕುಂಬಾರ ಕೆರೆಯಲ್ಲಿ ಕೂಳಿ ಬೇಟೆಯ ಸಂಭ್ರಮದಲ್ಲಿರುವ ಮೀನು ಬೇಟೆಗಾರರು.
ಹನಗೋಡು: ಹನಗೋಡು ಹೋಬಳಿ ಕಾಮಗೌಡನಹಳ್ಳಿ ಗ್ರಾಮಸ್ಥರು ಕುಂಬಾರ ಕೆರೆಯಲ್ಲಿ ಮಂಗಳವಾರ ಸಾಂಪ್ರದಾಯಿಕ ಕೂಳಿ ಬೇಟೆ ನಡೆಸುವ ಮೂಲಕ ಮೀನುಗಳನ್ನು ಹಿಡಿದು ಸಂಭ್ರಮಿಸಿದರು.
ಬೇಸಿಗೆಯ ಬಿರು ಬಿಸಿಲಿನಿಂದ ಕೆರೆಯ ನೀರು ಸಂಪೂರ್ಣ ಬತ್ತಿ ಹೋಗಿದ್ದರಿಂದ ಕೆರೆಯಲ್ಲಿದ್ದ ಮೀನುಗಳನ್ನು ಹಿಡಿಯಲು ಪ್ರತಿ ವರ್ಷದಂತೆ ಮುಂಗಾರು ಆರಂಭಕ್ಕೂ ಮುನ್ನ ಈ ಬಾರಿ ಕೂಡ ಕೂಳಿ ಬೇಟೆ ಆಯೋಜಿಸಲಾಗಿತ್ತು.
ಗ್ರಾಮದ ಜನರು ಬೆಳಗಿನಿಂದಲೇ ಕೆರೆಯಂಗಳದಲ್ಲಿ ಜಮಾಯಿಸಿ ಉತ್ಸಾಹದಿಂದ ಬೇಟೆಯಲ್ಲಿ ಪಾಲ್ಗೊಂಡರು. ಮೀನು ಹಿಡಿಯುವ ಪ್ರತಿ ಕೂಳಿಗೆ ಮುನ್ನೂರು (300) ರೂ. ಶುಲ್ಕ ನಿಗದಿ ಮಾಡಲಾಗಿತ್ತು. ಸುಮಾರು ನೂರಕ್ಕೂ ಹೆಚ್ಚು ಕೂಳಿ ಬೇಟೆಗಾರರು ಭಾಗವಹಿಸಿದ್ದರು. ಬೇಟೆಯ ವೇಳೆ ಅಪಾರ ಪ್ರಮಾಣದ ಮೀನುಗಳು ಸಿಕ್ಕಿದ್ದು, ಮನೆಗಳಿಗೆ ಕೊಂಡೊಯ್ದರು. ಗ್ರಾಮದಲ್ಲಿ ಹಲವು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬರುತ್ತಿದೆ.