ಐಟಿಸಿ ಕಂಪನಿಯ ನಿವೃತ್ತ ಅಧಿಕಾರಿ ಶ್ರೀನಿವಾಸ ರೆಡ್ಡಿರನ್ನು ಎನ್‌ಐಆರ್‌ಸಿಎ ವತಿಯಿಂದ ಸನ್ಮಾನಿಸಲಾಯಿತು. ಡಾ.ಎಸ್.ರಾಮಕೃಷ್ಣನ್, ಡಾ.ನಂದ, ಪ್ರವೀಣ್ ಇತರರಿದ್ದರು. 
ಮೈಸೂರು

ಐಟಿಸಿ ಕಂಪನಿ ನಿವೃತ್ತ ಅಧಿಕಾರಿಗೆ ಸನ್ಮಾನ

ಹುಣಸೂರು: ಇತ್ತೀಚೆಗೆ ನಿವೃತ್ತಿ ಹೊಂದಿದ ಐಟಿಸಿ ಕಂಪನಿಯ ಜನರಲ್ ಮ್ಯಾನೇಜರ್ ಶ್ರೀನಿವಾಸರೆಡ್ಡಿ ಅವರನ್ನು ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಕೇಂದ್ರ(ಎನ್‌ಐಆರ್‌ಸಿಎ-ಸಿಟಿಆರ್‌ಐ) ವತಿಯಿಂದ ಸನ್ಮಾನಿಸಲಾಯಿತು.
ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರದ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್, ಕಳೆದ 7 ವರ್ಷಗಳಿಂದ ಮೈಸೂರು ವಿಭಾಗ ವ್ಯಾಪ್ತಿಯ ಐಟಿಸಿ ಕಂಪನಿಯ ಜನರಲ್ ಮ್ಯಾನೇಜರ್(ಈ ಹಿಂದೆ ಲೀಫ್ ಮ್ಯಾನೇಜರ್ ಎನ್ನಲಾಗುತ್ತಿತ್ತು) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಸಾಕಷ್ಟು ರೈತರ ಮನ್ನಣೆ ಗಳಿಸಿದ್ದಾರೆ. ಈ ಭಾಗದ ತಂಬಾಕು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರೋಪಾಯಗಳು, ತಂಬಾಕು ಕೃಷಿಯಲ್ಲಿನ ನೂತನ ಪದ್ಧತಿಗಳ ಅಳವಡಿಕೆಗೆ ರೈತರಿಗೆ ಪ್ರೇರಣೆ ಮುಂತಾಗಿ ರೈತರೊಂದಿಗೆ ಬೆರೆತು ಕಾರ್ಯನಿರ್ವಹಿಸಿದ್ದಾರೆ.
ರೈತರ ಆರ್ಥಿಕಾಭಿವೃದ್ಧಿಗೆ ಕಂಪನಿ ರೂಪಿಸಿದ ಯೋಜನೆಗಳನ್ನು ಚಾಚೂತಪ್ಪದೆ ರೈತರಿಗೆ ನೀಡುವ ಮೂಲಕ ಕರ್ತವ್ಯಪರತೆ ಮೆರೆದಿದ್ದಾರೆ. ಎನ್‌ಐಆರ್‌ಸಿಎ ಕೇಂದ್ರದೊಂದಿಗೆ ಕೈಜೋಡಿಸಿ ರೈತಪರ ನಿಲುವುಗಳಿಗೆ ಬಲ ನೀಡಿದ್ದರು. ಅವರ ನಿವೃತ್ತ ಜೀವನ ಸಂಭ್ರಮದಿಂದ ಕೂಡಿರಲಿ ಎಂದು ಸಂಸ್ಥೆ ಆಶಿಸುತ್ತದೆ ಎಂದರು.
ಕಂಪನಿಯ ನೂತನ ಜನರಲ್ ಮ್ಯಾನೇಜರ್ ಪ್ರವೀಣ್, ಡಾ.ನಂದ ಇತರರಿದ್ದರು.