ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹಿರೀಕ್ಯಾತನಹಳ್ಳಿ ಗ್ರಾಮಸ್ಥರು ಮಹದೇಶ್ವರ ದೇವಸ್ಥಾನ ಉದ್ಘಾಟನೆಗೆ ಆಹ್ವಾನಿಸಿದರು. ಶಾಸಕ ಜಿ.ಡಿ.ಹರೀಶ್‌ಗೌಡ, ಮುಖಂಡರಾದ ಜಗದೀಶ್, ಸ್ವಾಮಿಗೌಡ, ಉದಯ್‌ಕುಮಾರ್ ಇತರರಿದ್ದರು.
ಹುಣಸೂರು: ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹದೇಶ್ವರಸ್ವಾಮಿ ದೇವಸ್ಥಾನ ಉದ್ಘಾಟನಾ ಸಮಾರಂಭವನ್ನು ಫೆ.6ರಂದು ಆಯೋಜಿಸಿದ್ದು, ಉದ್ಘಾಟನೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಆಹ್ವಾನಿಸಿದರು.
ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ ಹಾಗೂ ಗ್ರಾಮದ ಯಜಮಾನರಾದ ಜಗದೀಶ್, ಪಾಪಣ್ಣ ಸೇರಿದಂತೆ ಗ್ರಾಮದ ಮುಖಂಡರು ಇತ್ತೀಚೆಗೆ ಬೆಂಗಳೂರಿನ ಬಿಡದಿ ತೋಟದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಗ್ರಾಮಸ್ಥರಿಂದ ಗೌರವ ಸಮರ್ಪಿಸಿ ಆಹ್ವಾನ ಪತ್ರಿಕೆ ನೀಡಿ ಆಮಂತ್ರಿಸಲಾಯಿತು.
ಗ್ರಾಮದ ಮುಖಂಡರಾದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸ್ವಾಮಿಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಉದಯ್‌ಕುಮಾರ್, ಪುಟ್ಟರಾಜು, ಹರವೆ ಶ್ರೀಧರ್, ಮಹದೇವ್, ಸುರೇಶ್, ನಿಂಗರಾಜು, ಸಣ್ಣನಾಯಕ, ರವಿನಾಯಕ, ವೀರಶೈವ ಮುಖಂಡ ಶಿವಣ್ಣ, ಪ್ರಜ್ವಲ್, ಜಗದೀಶ್, ರಾಜಶೆಟ್ಟಿ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.