ಕೆ.ಆರ್.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಶಾಸಕ ಡಿ.ರವಿಶಂಕರ್ ಮಾತನಾಡಿದರು. ತಹಸೀಲ್ದಾರ್‌ಗಳಾದ ಜಿ.ಸುರೇಂದ್ರಮೂರ್ತಿ, ರುಕೀಯ ಬೇಗಂ, ತಾಪಂ ಇಒಗಳಾದ ಕುಲದೀಪ್, ಎಸ್.ರವಿ, ಪೋಲಿಸ್ ಇನ್ಸ್‌ಪೆಕ್ಟರ್ ಎಸ್.ಶಿವಪ್ರಕಾಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್ ಇನ್ನಿತರರಿದ್ದರು.
ಕೆ.ಆರ್.ನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಏಪ್ರಿಲ್ 14ರಂದು ಸರಳ ಮತ್ತು ಅರ್ಥಪೂರ್ಣವಾಗಿ ಪಟ್ಟಣದ ಬಾಬಾ ಸಾಹೇಬರ ಪುತ್ಥಳಿ ಬಳಿ ಆಚರಿಸಲು ತೀರ್ಮಾನಿಸಲಾಯಿತು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ಸಂಬಂಧ ಸೋಮವಾರ ಶಾಸಕ ಡಿ.ರವಿಶಂಕರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಮೈಸೂರು ರಸ್ತೆಯಲ್ಲಿರುವ ಬಾಬಾ ಸಾಹೇಬರ ಪುತ್ಥಳಿ ಬಳಿ ಜಯಂತಿ ಆಚರಣೆ ಮಾಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಹಾಜರಿದ್ದ ಜಿಪಂ ಮಾಜಿ ಸದಸ್ಯ ಸಿದ್ದಪ್ಪ, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ, ಸಾಲಿಗ್ರಾಮ ತಾಲೂಕು ಎಸ್‌ಸಿ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಂಠಿಕುಮಾರ್, ಆದಿಜಾಂಬವ ಸಂಘದ ಅಧ್ಯಕ್ಷ ಲೋಕೇಶ್, ಮುಖಂಡರಾದ ಡಿ.ಕೆ.ಕೊಪ್ಪಲು ರಾಜಯ್ಯ, ಹನಸೋಗೆ ಪೊಲೀಸ್ ಸಿದ್ದಯ್ಯ, ಹನಸೋಗೆ ನಾಗರಾಜ್, ವೆಂಕಟೇಶ್, ಹರೀಶ್ ಇನ್ನಿತರರು ಮಾತನಾಡಿ, ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ತಾಲೂಕು ಆಡಳಿತ ವತಿಯಿಂದ ಆಚರಣೆ ಮಾಡಬೇಕು. ನಂತರ ಇನ್ನೊಂದು ದಿನಾಂಕ ನಿಗದಿ ಮಾಡಿ ಸಮಾಜ ಮತ್ತು ಶಾಸಕರು ಸೇರಿ ಅದ್ದೂರಿಯಾಗಿ ಜಯಂತಿ ಆಚರಣೆ ಮಾಡುವಂತೆ ಸಲಹೆ ನೀಡಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಎಲ್ಲ ಸಮಾಜದ ಮುಖಂಡರನ್ನು ಆಹ್ವಾನಿಸಿ ಏಪ್ರಿಲ್ 14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗುತ್ತದೆ. ನಂತರ ಸಮುದಾಯದವರು ನಿಗದಿಪಡಿಸಿದ ದಿನಾಂಕದಂದು ಅದ್ದೂರಿಯಾಗಿ ಇಬ್ಬರು ನಾಯಕರ ಜಯಂತಿ ಕಾರ್ಯಕ್ರಮವನ್ನು ವೈಯಕ್ತಿಕವಾಗಿ ಆಚರಿಸಲಾಗುವುದು ಎಂದು ತಿಳಿಸಿದ ಶಾಸಕರು, ಈ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ಸಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಏ.14ರಂದು ಕೆ.ಆರ್.ನಗರ ಪಟ್ಟಣದಲ್ಲಿ ಹಾಗೂ ಸಾಲಿಗ್ರಾಮದಲ್ಲಿ ಬಾಬಾ ಸಾಹೇಬರ ಜಯಂತಿಯನ್ನು ಆ ಭಾಗದ ಮುಖಂಡರರನ್ನು ಕರೆದು ಅಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಆಚರಿಸುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರಲ್ಲದೆ, ಈಗಾಗಲೇ ಏ.4ರಿಂದ ಏ.15ರವರೆಗೆ ರಾಷ್ಟ್ರ ನಾಯಕರ ಎರಡು ಪ್ರತಿಮೆಗೆ ವಿದ್ಯುತ್ ಅಲಂಕಾರ ಮಾಡಿಸಲಾಗಿದೆ. ಹೂವಿನ ಅಲಂಕಾರ, ವೇದಿಕೆ ನಿರ್ಮಾಣ ಅಲ್ಲದೆ ನೆರೆದವರಿಗೆ ಲಘು ಉಪಾಹಾರದ ವ್ಯವಸ್ಥೆಯನ್ನು ಮಾಡುವ ಜತೆಗೆ ಯಾವುದೇ ಲೋಪ ದೋಷಗಳಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಲ್.ಶಂಕರಮೂರ್ತಿ ಅವರಿಗೆ ಸೂಚಿಸಿದರು.
ತಹಸೀಲ್ದಾರ್‌ಗಳಾದ ಜಿ.ಸುರೇಂದ್ರಮೂರ್ತಿ, ರುಕೀಯ ಬೇಗಂ, ತಾಪಂ ಇಒಗಳಾದ ಕುಲದೀಪ್, ಎಸ್.ರವಿ, ಪೋಲಿಸ್ ಇನ್ಸ್‌ಪೆಕ್ಟರ್ ಎಸ್.ಶಿವಪ್ರಕಾಶ್, ಅಬಕಾರಿ ನಿರೀಕ್ಷಕ ಲೋಕೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಕೆ.ಆರ್.ನಗರ ತಾಲೂಕು ಎಸ್‌ಸಿ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ವಿ.ಗುಡಿ ನಂದೀಶ್, ಎಂಎಸ್‌ಎಸ್ ತಾಲೂಕು ಅಧ್ಯಕ್ಷ ಎಂ.ಎಸ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಚ್.ಕುಮಾರ್, ಖಜಾಂಚಿ ಎಚ್.ಎಂ.ಮಂಜು, ದಸಂಸ ಜಿಲ್ಲಾ ಸಂಚಾಲಕ ಚಂದ್ರು, ಸಾಲಿಗ್ರಾಮ ತಾಲೂಕು ದಸಂಸ ಅಧ್ಯಕ್ಷ ಮುಂಡೂರು ಶಿವು, ಮುಖಂಡರಾದ ಎಂ.ಜೆ.ಕುಮಾರ್, ಎಂ.ಟಿ.ರಾಜೇಶ್, ಈರಯ್ಯ, ಕರ್ಣಕುಮಾರ್, ತಿರುಮಲ ಮತ್ತಿತರರು ಹಾಜರಿದ್ದರು.