ಹುಣಸೂರು : ತಾಲೂಕಿನ 15 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಬುಧವಾರದಿಂದ ಪರೀಕ್ಷೆ ನಡೆಯಲಿದ್ದು, ಒಟ್ಟು 3784 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅಣಿಯಾಗಿದ್ದಾರೆ.
ಹುಣಸೂರು : ತಾಲೂಕಿನ 15 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಬುಧವಾರದಿಂದ ಪರೀಕ್ಷೆ ನಡೆಯಲಿದ್ದು, ಒಟ್ಟು 3784 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅಣಿಯಾಗಿದ್ದಾರೆ.
ಮಾರ್ಚ್ 18ರಿಂದ ಆರಂಭಗೊಳ್ಳುವ ಪರೀಕ್ಷೆಯಲ್ಲಿ ತಾಲೂಕಿನಲ್ಲಿ 1937ಹೆಣ್ಣು ಹಾಗೂ 1847 ಗಂಡು ಮಕ್ಕಳು ಸೇರಿದಂತೆ ಒಟ್ಟು 3784 ವಿದ್ಯಾರ್ಥಿಗಳು ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ಪೈಕಿ ಹೆಣ್ಣು ಮಕ್ಕಳೇ ಹೆಚ್ಚಿರುವುದು ವಿಶೇಷ. 32 ಸರ್ಕಾರಿ, 8 ಅನುದಾನಿತ, 6 ಅಂಬೇ ಡ್ಕರ್, ಮುರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಮೌಲಾನಾ ಅಜಾದ್ ಶಾಲೆಗಳು ಹಾಗೂ 25 ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 71 ಪ್ರೌಢಶಾಲೆಗಳಿದ್ದು, ಉತ್ತಮ ಫಲಿತಾಂಶ ಪಡೆಯಲು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ವಿಶಿಷ್ಟ, ವಿಭಿನ್ನ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಪರೀಕ್ಷೆಗೆ ಅಣಿಗೊಳಿಸಿದ್ದಾರೆ.
ಎಲ್ಲೆಲ್ಲಿವೆ ಕೇಂದ್ರಗಳು?: ನಗರದ ಸಂತ ಜೋಸೆಫರ ಶಾಲೆ, ಟ್ಯಾಲೆಂಟ್, ಬಾಲಕಿಯರ ಪದವಿ ಪೂರ್ವ ಕಾಲೇಜು, ಎಂ.ಆರ್.ಎನ್.ವಿ. ಪ್ರೌಢಶಾಲೆ, ಹನಗೋಡಿನ ಸರ್ಕಾರಿ ಪ್ರೌಢಶಾಲೆ ಹಾಗೂ ಲಕ್ಷ್ಮಣತೀರ್ಥ ವಿದ್ಯಾ ಸಂಸ್ಥೆ, ಬಿಳಿಕೆರೆಯ ವಿದ್ಯಾವಾರಿಧಿ ಶಿಕ್ಷಣ ಸಂಸ್ಥೆ, ಕರೀಮುದ್ದನಹಳ್ಳಿ ಹಾಗೂ ಬಿಳಿಕೆರೆ ಸರ್ಕಾರಿ ಪಿಯು ಕಾಲೇಜು, ಕೆ.ಪಿ.ಎಸ್.ಗಾವಡಗೆರೆ, ರತ್ನಪುರಿ, ಚಿಲ್ಕುಂದ, ಹಿರಿಕ್ಯಾತನಹಳ್ಳಿ, ಬನ್ನಿಕುಪ್ಪೆ, ಗುರುಪುರ ಫ್ರೌಢಶಾಲೆಗಳು ಪರೀಕ್ಷಾ ಕೇಂದ್ರಗಳಾಗಿವೆ.
ಜಾಗೃತ ದಳ ಕಾರ್ಯನಿರ್ವಹಣೆ: ತಹಸೀಲ್ದಾರ್, ತಾಲೂಕು ಪಂಚಾಯಿತಿ ಇಒ ಹಾಗೂ ಬಿಇಒ ನೇತೃತ್ವದ ತಾಲೂಕು ಮಟ್ಟದ ಜಾಗೃತ ದಳ ಹಾಗೂ 15 ಕೇಂದ್ರಗಳಲ್ಲೂ ಸ್ಥಾನಿಕ ಜಾಗೃತ ದಳ ಕಾರ್ಯ ನಿರ್ವಹಿಸಲಿದೆ. ಪ್ರತಿ ಕೇಂದ್ರವು ವೆಬ್ ಕಾಸ್ಟಿಂಗ್ ಕೇಂದ್ರವಾಗಿರಲಿದೆ.
ಶಿಕ್ಷಣ ತಜ್ಞರಿಂದ ತರಬೇತಿ: ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಪರೀಕ್ಷೆಯಲ್ಲಿ ಕನಿಷ್ಠ ಪಾಸ್ ಆಗುವಂತೆ ನೋಡಿಕೊಳ್ಳುವ ಸಲುವಾಗಿ ವಿಷಯವಾರು ಶಿಕ್ಷಣ ತಜ್ಞರಿಂದ ತರಬೇತಿ ಕೊಡಿಸಲಾಗಿದೆ. ಅಲ್ಲದೆ ಹೋಬಳಿವಾರು ಪರೀಕ್ಷಾ ಭಯ ನಿವಾರಣಾ ಬಗ್ಗೆ ಕಾರ್ಯಾಗಾರ ನಡೆಸಲಾಗಿದೆ. ಅಲ್ಲದೆ ಶಿಕ್ಷಕರು ಮನೆಮನೆಗೆ ಭೇಟಿ ಇತ್ತು ಮಕ್ಕಳ ಕಲಿಕೆ, ಓದನ್ನು ಗಮನಿಸಿದ್ದಾರೆ. ನಾಲ್ಕು ಮಾದರಿ ಪ್ರಶ್ನೆಪತ್ರಿಕೆಗಳ ಹಾಗೂ ಮೂರು ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗಿದ್ದು, ಇವುಗಳನ್ನು ಅಭ್ಯಸಿಸಿದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತೇರ್ಗಡೆ ಹೊಂದಲು ಸಾಧ್ಯವಾಗಲಿದೆ. ತಹಸೀಲ್ದಾರ್ ಜೆ.ಮಂಜುನಾಥ್ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರ ಸಭೆ ನಡೆಸಿ ಪರೀಕ್ಷಾ ಕಾರ್ಯದ ಕುರಿತು ಮಾಹಿತಿ ನೀಡಿದ್ದಾರೆ. ಈ ಬಾರಿ ಎಸ್‌ಎಸ್ ಎಲ್‌ಸಿ ಪರೀಕ್ಷೆಯ ಉಸ್ತುವಾರಿ ಅಧಿಕಾರಿಯಾಗಿ ಬಿಆರ್‌ಸಿ ಹೇಮಲತಾ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಇಒ ಮಹದೇವ್ ಎಸ್.ಪಿ. ತಿಳಿಸಿದ್ದಾರೆ.
ಮೊದಲ ಸ್ಥಾನಕ್ಕೆ ಗುರಿ: ಮೂರನೇ ಅವಧಿಯ ಪ್ರಿಪರೇಟರಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲನೇ ಸ್ಥಾನ ಬಂದಿದ್ದು, ಇದೇ ಸ್ಥಾನವನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗಿದೆ. ಈ ಬಾರಿ ಪಾಸಿಂಗ್ ಮಾರ್ಕ್ಸ್ ವಿಷಯವಾರು 33 ಅಂಕ ನಿಗದಿಪಡಿಸಿದ್ದು, ಇಂಟರ್‌ನಲ್ ಮಾರ್ಕ್ಸ್ ಕನ್ನಡಭಾಷೆಯಲ್ಲಿ 25 ಹಾಗೂ ಇತರ ವಿಷಯಗಳಲ್ಲಿ 20 ಅಂಕ ಸಿಗಲಿದ್ದು, ಪರೀಕ್ಷೆ ನಡೆಯುವ ಕನ್ನಡ 41 ಹಾಗೂ ಇತರ ವಿಷಯದಲ್ಲಿ ಇಂಟರ್‌ನಲ್ ಮಾರ್ಕ್ಸ್ ಸೇರಿದಂತೆ 33 ಅಂಕ ಪಡೆವ ವಿದ್ಯಾರ್ಥಿ ತೇರ್ಗಡೆ ಹೊಂದಲು ಅವಕಾಶವಿದೆ.