ಮೈಸೂರು ನಗರದ ರಂಗಾಂುಣದ ಶ್ರೀರಂಗ ವೇದಿಕೆಂುಲ್ಲಿ ಭಾನುವಾರ ಆಯೋಜಿಸಿದ್ದ ಕವಯಿತ್ರಿ ಸಂಘಮಿತ್ರೆ ನಾಗರಗಟ್ಟ ರಚಿತ ‘ಎಲ್ಲಾದರ ಹದವಿದ್ದರೆ’ ಕೃತಿಯನ್ನು ಲೇಖಕಿ ರೂಪಾ ಹಾಸನ ಬಿಡುಗಡೆ ಮಾಡಿದರು. ಡಾ.ಎಚ್.ಡಿ.ಉಮಾಶಂಕರ್, ಸತೀಶ್ ತಿಪಟೂರು, ಪ್ರಸಾದ್ ಕುಂದೂರು, ಹುಲಿಕುಂಟೆ ಮೂರ್ತಿ ಹಾಗೂ ಇತರರು ಇದ್ದರು.
ಒಳ್ಳೆಯ ಕವಿಯಾಗಲು ಮನುಷ್ಯತ್ವ ಮತ್ತು ಕರುಣೆ ಅಗತ್ಯ. ಇದರೊಂದಿಗೆ ಪ್ರಾವಾಣಿಕತೆ, ನಿಷ್ಠುರವಾಗಿ ಸತ್ಯ ಹೇಳುವ ಧೈಂರ್ು ಹಾಗೂ ಮಗುವಿನಂತಹ ಮುಗ್ಧತೆ ಇರಬೇಕು ಎಂದು ಲೇಖಕಿ ರೂಪಾ ಹಾಸನ ಹೇಳಿದರು.
ನಿರಂತರ ೌಂಡೇಷನ್ ಮೈಸೂರು ಮತ್ತು ತಮಟೆ ಪುಸ್ತಕ ಪ್ರಕಾಶನ ನಗರದ ರಂಗಾಂುಣದ ಶ್ರೀರಂಗ ವೇದಿಕೆಂುಲ್ಲಿ ಭಾನುವಾರ ಆಯೋಜಿಸಿದ್ದ ಕವಯಿತ್ರಿ ಸಂಘಮಿತ್ರೆ ನಾಗರಗಟ್ಟ ರಚಿತ ‘ಎಲ್ಲಾದರ ಹದವಿದ್ದರೆ’ ಕೃತಿ ಬಿಡುಗಡೆಗೊಳಿಸಿ ವಾತನಾಡಿ, ಕವಿತೆ ಕೇವಲ ಕಲೆಂುಲ್ಲ ಅಥವಾ ಅಭಿವ್ಯಕ್ತಿಂುಲ್ಲ, ಅದು ಮನಸ್ಸಿನ ಬಿಡುಗಡೆಂು ವಾರ್ಗ. ಕವಿತೆಗೆ ಚಿಕಿತ್ಸಕ ಗುಣವಿದೆ. ಮನದ ದುಗುಡ, ತಳಮಳ, ನೋವುಗಳನ್ನು ಪದಗಳಾಗಿ ಹೊರಹಾಕಿದಾಗ ಅದು ಆತ್ಮಕ್ಕೆ ಸವಾಧಾನ ನೀಡುತ್ತದೆ. ಅದಕ್ಕಾಗಿಂೆುೀ ನಾನು ಕವಿತೆಂುನ್ನು ಒಂದು ಥೆರಪಿಂುಂತೆ ಕಾಣುತ್ತೇನೆ ಎಂದು ಹೇಳಿದರು.
ಸಂಘಮಿತ್ರೆಂು ಕವಿತೆಗಳಲ್ಲಿ ಕೇವಲ ಭಾವನೆಗಳಷ್ಟೇ ಅಲ್ಲ, ಸವಾಜದ ಕುರಿತು ಸೂಕ್ಷ್ಮ ದೃಷ್ಟಿಕೋನ, ಆತ್ಮವಿಮರ್ಶೆ, ಪ್ರಾವಾಣಿಕತೆ ಮತ್ತು ಅಂತಃಪ್ರಜ್ಞೆಂುೂ ಇದೆ. ಆ ಅಂತಃಶಕ್ತಿಂೆುೀ ಅವಳನ್ನು ಸದಾ ಸರಿಂಾದ ದಾರಿಂುಲ್ಲಿ ಮುನ್ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೇಖಕ ಡಾ.ಎಚ್.ಡಿ.ಉಮಾಶಂಕರ್ ಮಾತನಾಡಿ, ಕನ್ನಡ ಕಾವ್ಯ ಇತಿಹಾಸದಲ್ಲಿ ಮೊದಲ ಮಹತ್ವದ ತಿರುವನ್ನು ವಚನಕಾರರು ನೀಡಿದರು. ನಂತರ ದಲಿತ ಕಾವ್ಯ ಪ್ರವೇಶಿಸಿದಾಗ ಕನ್ನಡ ಕಾವ್ಯದ ಪಥವೇ ಬದಲಾಯಿತು. 1970ರ ದಶಕದಲ್ಲಿ ದಲಿತ ಕಾವ್ಯ ಹೊಸ ಭಾಷೆ, ಹೊಸ ಅನುಭವ ಮತ್ತು ಹೊಸ ಸಂವೇದನೆಗಳನ್ನು ಸಾಹಿತ್ಯಕ್ಕೆ ನೀಡಿತು. ಎಲ್.ಎನ್. ಹನುಮಂತಂ್ಯು, ಸಿದ್ದಲಿಂಗಂ್ಯು ಸೇರಿದಂತೆ ಹಲವರು ಕನ್ನಡ ಕಾವ್ಯಕ್ಕೆ ಹೊಸ ದಿಕ್ಕು ತೋರಿಸಿದರು ಎಂದು ಹೇಳಿದರು.
ರಂಗಾಂುಣ ನಿರ್ದೇಶಕ ಸತೀಶ್ ತಿಪಟೂರು, ರಂಗಕರ್ಮಿ ಪ್ರಸಾದ್ ಕುಂದೂರು, ಸಾಹಿತಿ ಹುಲಿಕುಂಟೆ ಮೂರ್ತಿ ಹಾಗೂ ಇತರರು ಇದ್ದರು.