ಹುಣಸೂರು ತಾಲೂಕು ಕುಪ್ಪೆಯಲ್ಲಿ ವಾತ್ಸಲ್ಯ ಯೋಜನೆಯಡಿ ಫಲಾನುಭವಿ ವೆಂಕಟಮ್ಮ ಅವರಿಗೆ ಮನೆ ಹಸ್ತಾಂತರಿಸಲಾಯಿತು. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶುಭಾದೇವಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹಂದನಹಳ್ಳಿಸೋಮಶೇಖರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಚಿಕ್ಕದೇವಮ್ಮ ಇತರರಿದ್ದರು. 
ಮೈಸೂರು

ವಾತ್ಸಲ್ಯ ಯೋಜನೆಯಡಿ ಮನೆ ಹಸ್ತಾಂತರ

ಲೋಕೇಶ್ ಮನು. ಡಿ
ಹುಣಸೂರು : ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಹುಣಸೂರು-2 ಕಚೇರಿ ವತಿಯಿಂದ 2025-2026ನೇ ಸಾಲಿನಲ್ಲಿ ವಾತ್ಸಲ್ಯ ಯೋಜನೆಯಡಿ ತಾಲೂಕಿನ ತರಿಕಲ್, ರತ್ನಪುರಿ, ಕುಪ್ಪೆ ಗ್ರಾಮಗಳಲ್ಲಿ ಸಹಾಯಕರಿಗೆ ನಿರ್ಮಿಸಿಕೊಟ್ಟಿರುವ ವಾತ್ಸಲ್ಯ ಮನೆಗಳನ್ನು ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಹಸ್ತಾಂತರಿಸಿದರು.
ಭಾನುವಾರ ತಾಲೂಕಿನ ತರಿಕಲ್ ಗ್ರಾಮದಲ್ಲಿ ಮನೆಗಳನ್ನು ವಿತರಿಸಿ ತಾಲೂಕು ಯೋಜನಾಧಿಕಾರಿ ಶುಭಾದೇವಿ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮದಡಿ ಸಂಸ್ಥೆ ವತಿಯಿಂದ ಈವರೆಗೆ ಎಂಟು ಅಸಹಾಯಕ ಕುಟುಂಬಗಳಿಗೆ ವಾತ್ಸಲ್ಯ ಮನೆ ನಿರ್ಮಿಸಿಕೊಡಲಾಗಿದೆ. ಅಲ್ಲದೆ ಜೀವನ ಸಂಧ್ಯಾಕಾಲದಲ್ಲಿರುವ ವೃದ್ಧರನ್ನು ಗುರುತಿಸಿ 120 ಜನರಿಗೆ ಮಾಶಾಸನ ವಿತರಿಸಲಾಗುತ್ತಿದೆ. ಅಗತ್ಯವುಳ್ಳವರಿಗೆ ವಾತ್ಸಲ್ಯ ಕಿಟ್ ಮೂಲಕ ಪಾತ್ರೆ, ಬಟ್ಟೆ, ಚಾಪೆ, ಹೊದಿಕೆ, ಔಷಧ ವಿತರಿಸಲಾಗಿದೆ. ಇನ್ನು ಜನಮಂಗಲ ಕಾರ್ಯಕ್ರಮದಡಿ ರೋಗಿಗಳಿಗೆ ವಾಟರ್‌ಬೆಡ್, ವೀಲ್‌ಚೇರ್, ವಾಕರ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಮಾತನಾಡಿ, ಡಾ.ವೀರೆಂದ್ರಹೆಗ್ಗಡೆ-ಮಾತೃಶ್ರೀ ಹೇಮಾವತಿ ಅಮ್ಮನವರ ಕಾರ್ಯಕ್ರಮಗಳು ಗ್ರಾಮಾಭಿವೃದ್ಧಿ ಯೋಜನೆಗೆ ಹಾಗೂ ಮಹಿಳೆಯರ ಸ್ವಾವಲಂಬಿ ಬದುಕಿಗೆ ಪೂರಕವಾಗಿದ್ದು, ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ತರಿಕಲ್‌ನ ಚಲ್ಲಪ್ಪಗೌಡರ್, ರತ್ನಪುರಿಯ ಅಮ್ಮಣ್ಣಮ್ಮ, ಕುಪ್ಪೆಯ ವೆಂಕಟಮ್ಮನವರಿಗೆ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಮಿಸಿರುವ ವಾತ್ಸಲ್ಯ ಮನೆಗಳನ್ನು ಹಸ್ತಾಂತರಿಸಲಾಯಿತು.
ಈ ವೇಳೆ ವಿವಿಧೆಡೆ ನಡೆದ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಲಕ್ಷಮ್ಮ, ತಾಲೂಕು ನೋಡಲ್ ಆಧಿಕಾರಿ ತಾರಾನಾಥ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಚಿಕ್ಕದೇವಮ್ಮ, ವಲಯದ ಮೇಲ್ವಿಚಾರಕಿ ರೇಖಾ ಸೇವಾಪ್ರತಿನಿಧಿಗಳಾದ ರಮೇಶ್, ನೇತ್ರಾ, ದೀಪಿಕಾ, ಮೈಮುನ್ನಾ, ಸುಷ್ಮಾ, ಸುಮಲತಾ, ಬನ್ನಿಕುಪ್ಪೆ ಪಿಡಿಒ ರಾಘವೇಂದ್ರ ಪ್ರಸನ್ನ, ಗ್ರಾ.ಪಂ. ಮಾಜಿ ಸದಸ್ಯೆ ಹೇಮಾವತಿ, ನವಜೀವನ ಸಮಿತಿ ಸದಸ್ಯ ಚಂದ್ರೇಗೌಡ ಇತರರು ಇದ್ದರು.